LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕನ ವಿರುದ್ಧ FIR ದಾಖಲು.....ದೂರು ನೀಡಿದ ಸರ್ಕಾರಿ ಅಧಿಕಾರಿ.....

ಬೆಂಗಳೂರು -

ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿ ಪರ ಆನೇಕಲ್‌ನಲ್ಲಿ ಪೋಲಿಂಗ್‌ ಏಜೆಂಟ್‌ ಆಗಿ ಕಾರ್ಯನಿರ್ವಹಿಸಿದ ಅನುದಾನಿತ ಶಾಲೆಯ ಶಿಕ್ಷಕ ಗೋಪಾಲ ವೈ ವಿರುದ್ಧ ಆನೇಕಲ್‌ ಪೊಲೀಸ್‌‍ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆಈ ಸಂಬಂಧ ಚುನಾವಣಾ ಮತಗಟ್ಟೆ ಅಧಿಕಾರಿ ರವಿಪ್ರಸಾದ್‌ ಅವರು ದೂರು ನೀಡಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಕಳೆದ ಮೂರು ದಿನಗಳ ಹಿಂದೆ ನಡೆದ ಚುನಾವಣೆ ಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿ ಪುಟ್ಟಣ್ಣ ಅವರ ಪರವಾಗಿ ಪೋಲಿಂಗ್‌ ಏಜೆಂಟ್‌ ಆಗಿ ಶಿಕ್ಷಕ ಗೋಪಾಲ ಅವರು ಕಾರ್ಯನಿರ್ವಹಿಸುತ್ತಿದ್ದರು.ನಿಯಮಗಳ ಪ್ರಕಾರ ಸರ್ಕಾರಿ ಅಥವಾ ಅನುದಾನಿತ ಸಂಸ್ಥೆಗಳ ಶಿಕ್ಷಕರು ಯಾವುದೇ ರಾಜಕೀಯ ಪಕ್ಷದ ಪರ ಚುನಾವಣಾ ಏಜೆಂಟ್‌ ಆಗಿ ಕೆಲಸ ಮಾಡುವಂತಿಲ್ಲ.

ಕೆಆರ್‌ಎಸ್‌‍ ಪಕ್ಷದ ಅಭ್ಯರ್ಥಿಯ ಪರ ಚುನಾವಣಾ ಏಜೆಂಟ್‌ ಆಗಿ ಮತಗಟ್ಟೆ ವೀಕ್ಷಣೆಗಾಗಿ ಬಂದಿದ್ದ ಮುಖಂಡ ರಘುಪತಿ ಭಟ್‌ ಅವರು ಶಿಕ್ಷಕ ಗೋಪಾಲ ಅವರನ್ನು ಗುರುತಿಸಿ ಪೋಲಿಂಗ್‌ ಏಜೆಂಟ್‌ ಆಗಿರು ವುದಕ್ಕೆ ಆಕ್ಷೇಪಿಸಿರುತ್ತಾರೆ.ನಂತರ ಮತಗಟ್ಟೆ ಅಧಿಕಾರಿ ಗೋಪಾಲ ಅವರ ಗುರುತಿನ ಚೀಟಿ ಪರಿಶೀಲಿಸಿದಾಗ ಸೋಲೂರಿನ ವಿನೋಭ ಭಾವೆ ಪ್ರೌಢಶಾಲೆಯ ಸರ್ಕಾರಿ ಶಿಕ್ಷಕರು ಎಂಬುವುದು ಕಂಡು ಬಂದಿದೆ.

ಈ ಸಂಬಂಧ ಮತಗಟ್ಟೆ ಅಧಿಕಾರಿ ರವಿಪ್ರಸಾದ್‌ ಅವರು ಆನೇಕಲ್‌ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಎಫ್‌ಐಆರ್‌ ದಾಖಲಿಸಿಕೊಂ ಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ನೌಕರ ಆತ್ಮಹತ್ಯೆ....ಬೆಳ್ಳಂ ಬೆಳಿಗ್ಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನೌಕರ.....ಮಾಜಿ ಶಿಕ್ಷಣ ಸಚಿವ ಬಂಧನ..... ಶಾಲೆಗಳ ಅನುಮತಿ ನೀಡುವ 100 ಕೋಟಿ ವಂಚನೆ ಕೇಸ್​ನಲ್ಲಿ ಲಾಕ್.....ಹೊಸದಾಗಿ ನೇಮಕಾತಿಯಾಗುವ ಶಿಕ್ಷಕರ ವೇತನ ಭರ್ಜರಿ ಹೆಚ್ಚಳ.....ಹೊಸದಾಗಿ ನೇಮಕಾತಿ ಯಾಗುವ ಶಿಕ್ಷಕರ ವೇತನ ಎಷ್ಟು ಗೊತ್ತಾ.....ಮಾಜಿ ಮೇಯರ್ ಪೂರ್ಣಾ ಪಾಟೀಲ್ ನಿಧನ.....ನಾಳೆ ಹೊಸ ಯಲ್ಲಾಪುರ ರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರ.....ಶಿಕ್ಷಕನ ವಿರುದ್ಧ FIR ದಾಖಲು.....ದೂರು ನೀಡಿದ ಸರ್ಕಾರಿ ಅಧಿಕಾರಿ.....CM ಡಿಕೆ ಶಿವಕುಮಾರ್ ಅವರಿಗೆ ಸ್ವಾಗತ ಮಾಡಿ ಬರಮಾಡಿಕೊಂಡ ರಾಬರ್ಟ್ ದದ್ದಾಪೂರಿ.....CM ಡಿಕೆ ಶಿವಕುಮಾರ್ ಅವರಿಗೆ ಸ್ವಾಗತ ಮಾಡಿ ಬರಮಾಡಿಕೊಂಡ ರಾಬರ್ಟ್ ದದ್ದಾಪೂರಿ.....ರಜಾ ದಿನದಲ್ಲಿ ಶಾಲೆಯ ಮೆರಗನ್ನು ಹೆಚ್ಚಿಸುವ ಶಿಕ್ಷಕ.....ಶಿಕ್ಷಕ ಪರಶುರಾಮ ಕಾರ್ಯಕ್ಕೆ ಮೆಚ್ಚುಗೆ.....ಶಿಕ್ಷಕ ಅಮಾನತು ಅಮಾನತು ಮಾಡಿದ ಜಿಲ್ಲಾಧಿಕಾರಿ.....17 BEO ಗಳ ವಿರುದ್ಧ FIR ದಾಖಲಿಸಲು ಮನವಿ.....ಅಧಿಕಾರ ದುರುಪಯೋಗ ಮಾಡಿಕೊಂಡ BEO ಗಳ ವಿರುದ್ಧ ಆಕ್ರೋಶ.....