ಹಾವೇರಿ -
ಪದವೀಧರ ಪಶ್ಚಿಮ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತದಾನದ ವೇಳೆ ನಕಲಿ ಮತದಾನ ಆರೋಪದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದಡಿ ಮತಗಟ್ಟೆ ಸಹಾಯಕ ಅಧಿಕಾರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ವಿ.ಜಿ. ಮಲ್ಲೂರು ಅವರನ್ನು ಅಮಾನತುಗೊಳಿಸಲಾಗಿದೆ.
ಹಾವೇರಿ ಜಿಲ್ಲಾ ಚುನಾವಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ ಬೇರೊಬ್ಬರ ಹೆಸರಿನಲ್ಲಿ ಮತ ಚಲಾಯಿಸಿದ ಆರೋಪ ಎದುರಿಸುತ್ತಿರುವ ಮಹಿಳೆಯ ವಿರುದ್ಧ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.ಹಾವೇರಿ ಮತಗಟ್ಟೆಯಲ್ಲಿ ನಕಲಿ ಮತದಾನದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರು ವಿಚಾರಣೆ ನಡೆಸಿದ್ದರು ಬಸವೇಶ್ವರ ನಗರದ ಆಶಾ ಪಾಟೀಲ ಅವರ ಹೆಸರಿನಲ್ಲಿ ಶಿವಾಜಿ ನಗರದ ಶಿಲ್ಪಾ ನಿಂಗಪ್ಪ ಬಡಮ್ಮನವರ ಮತದಾನ ಮಾಡಿದ್ದಾರೆ ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಚುನಾವಣಾ ಧಿಕಾರಿಗೆ ವರದಿ ಸಲ್ಲಿಸಿದ್ದಾರೆ.
ಗುರುತಿನ ಚೀಟಿ ಪರಿಶೀಲನೆ ಮತ್ತು ಮತದಾನಕ್ಕೆ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂಬ ಆರೋಪ ಕೇಳಿಬಂದಿದೆ ಚುನಾವಣೆಯಂತಹ ಮಹತ್ವದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರ ಗುರುತನ್ನು ನಿಯಮಾನುಸಾರ ಪರಿಶೀಲಿಸುವುದು ಮತಗಟ್ಟೆ ಅಧಿಕಾರಿಗಳ ಜವಾಬ್ದಾರಿಯಾಗಿದೆ ಮತಗಟ್ಟೆ ಸಂಖ್ಯೆ 85ರಲ್ಲಿ ಮತದಾರರ ಗುರುತಿನ ಚೀಟಿ ಪರಿಶೀಲಿಸುವ ಜವಾಬ್ದಾರಿಯನ್ನು ಮತಗಟ್ಟೆ ಸಹಾಯಕ ಅಧಿಕಾರಿಯಾಗಿ ನೇಮಕಗೊಂಡಿದ್ದ ಶಿಕ್ಷಕ ಬಿ.ಜಿ. ಮಲ್ಲೂರು ಅವರಿಗೆ ವಹಿಸಲಾಗಿತ್ತು.
ಶಿಲ್ಪಾ ಬಡಮ್ಮನವರ ಅವರು ಮತಗಟ್ಟೆಗೆ ಬಂದಾಗ ಗುರುತಿನ ಚೀಟಿಯಲ್ಲಿದ್ದ ಫೋಟೋವನ್ನು ಸರಿಯಾಗಿ ಪರಿಶೀಲಿಸದೆ ಆಶಾ ಪಾಟೀಲ ಅವರ ಹೆಸರನ್ನು ಕೂಗಿದ್ದರು ಮತ್ತೊಬ್ಬ ಮತಗಟ್ಟೆ ಸಹಾಯಕ ಅಧಿಕಾರಿಗೆ ಮತಪತ್ರ ನೀಡುವಂತೆ ವಿ.ಜಿ. ಮಲ್ಲೂರು ಸೂಚಿಸಿದ್ದರಂತೆ ಬಳಿಕ ಶಿಲ್ಪಾ ಅವರು ಆಶಾ ಪಾಟೀಲ ಅವರ ಹೆಸರಿನಲ್ಲಿ ಮತ ಚಲಾಯಿಸಿ ಮತಗಟ್ಟೆಯಿಂದ ತೆರಳಿದ್ದಾರೆ ಎಂಬ ಆರೋಪವಿದೆ.
ಮತದಾರರ ಗುರುತಿನ ಚೀಟಿಯಲ್ಲಿರುವ ಫೋಟೋ ಹಾಗೂ ಮತದಾನಕ್ಕೆ ಬಂದಿರುವ ವ್ಯಕ್ತಿಯ ಗುರುತನ್ನು ಸರಿಯಾಗಿ ಪರಿಶೀಲಿಸುವುದು ಅಗತ್ಯವಾಗಿತ್ತು. ಈ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂಬುದು ವಿಚಾರಣೆಯ ಪ್ರಮುಖ ಅಂಶವಾಗಿದೆ.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ಉಪವಿಭಾ ಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಮತಗಟ್ಟೆ ಸಹಾಯಕ ಅಧಿಕಾರಿಯ ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದು ಚುನಾವಣಾ ನಿಯಮಗಳ ಪಾಲನೆಯಲ್ಲಿ ನಿರ್ಲಕ್ಷ್ಯ ವಹಿಸಿರುವ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕ ವಿ.ಜಿ. ಮಲ್ಲೂರು ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಶಿಫಾರಸು ಮಾಡಲಾಗಿತ್ತು.
ಪದವೀಧರ ಪಶ್ಚಿಮ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ವೇಳೆ ನಕಲಿ ಮತದಾನ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕ ವಿ.ಜಿ. ಮಲ್ಲೂರು ಅವರನ್ನು ಕರ್ತವ್ಯ ಲೋಪದ ಆರೋಪ ದಡಿ ಅಮಾನತುಗೊಳಿಸಲಾಗಿದೆ. ಬೇರೊಬ್ಬರ ಹೆಸರಿನಲ್ಲಿ ಮತ ಚಲಾಯಿಸಿದ ಆರೋಪ ಎದುರಿಸುತ್ತಿರುವ ಮಹಿಳೆಯ ವಿರುದ್ಧವೂ ಪೊಲೀಸ್ ದೂರು ದಾಖಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಬಾಕಿಯಿದೆ.
ಸುದ್ದಿ ಸಂತೆ ನ್ಯೂಸ್ ಹಾವೇರಿ.....