LIVE TV LocalCrimeNationalInternationalPoliticsEducationTechnologyEntertainmentSportsFeature
State News

17 BEO ಗಳ ವಿರುದ್ಧ FIR ದಾಖಲಿಸಲು ಮನವಿ.....ಅಧಿಕಾರ ದುರುಪಯೋಗ ಮಾಡಿಕೊಂಡ BEO ಗಳ ವಿರುದ್ಧ ಆಕ್ರೋಶ.....

ಬೆಂಗಳೂರು -

ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಹಣ ಹಂಚಿಕೆ ಆರೋಪದ ಹಿನ್ನೆಲೆ ಯಲ್ಲಿ BEO ಗಳ ವಿರುದ್ಧ  ಬಿಜೆಪಿ-ಜೆಡಿಎಸ್ ದೂರು ನೀಡಿದೆ ಬೆಂಗಳೂರು ಸೇರಿದಂತೆ ರಾಜ್ಯದ ನಾಲ್ಕು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಆಮಿಷ ತೋರಿದ್ದಾರೆ ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು ಗಿಫ್ಟ್ ಕೂಪನ್, ಉಡುಗೊರೆ ಹಾಗೂ ಹಣ ವಿತರಿಸುತ್ತಿದ್ದಾರೆ

ಈ ಸಂಬಂಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ-ಜೆಡಿಎಸ್ ನಿಯೋಗ ಮುಖ್ಯ ಚುನಾವಣಾಧಿ ಕಾರಿಗೆ ದೂರು ಸಲ್ಲಿಸಿದ್ದಾರೆ ದಸರಾ ಶುಭಾಶಯದ ಹೆಸರಿನಲ್ಲಿ ನೀಡಲಾಗುತ್ತಿರುವ ಕೂಪನ್‌ಗಳನ್ನು ಸ್ಕ್ಯಾನ್ ಮಾಡಿದಾಗ ಲೂಲೂ ಮಾಲ್‌ಗೆ ಸಂಪರ್ಕ ಕಲ್ಪಿಸುತ್ತದೆ. 17 ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಮೂಲಕ ಗಿಫ್ಟ್ ಕಾರ್ಡ್‌ಗಳನ್ನು ಹಂಚಲಾಗಿದೆ ಫ್ಲಾಸ್ಕ್, ಟಿಫಿನ್ ಬಾಕ್ಸ್ ಹಾಗೂ ಕವರ್‌ಗಳಲ್ಲಿ ಹಣ ವನ್ನೂ ಶಿಕ್ಷಕರಿಗೆ ನೀಡಲಾಗುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಚುನಾವಣೆಯಲ್ಲಿ ಸರ್ಕಾರಿ ಅಧಿಕಾರ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆಕ್ಷೇಪಿಸಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳ ಛಾಯಾಚಿತ್ರಗಳೊಂದಿಗೆ ಮಾಹಿತಿ ಬಹಿರಂಗಪಡಿಸು ವುದಾಗಿ ತಿಳಿಸಿ, ಭಾಗಿಯಾಗಿರುವ BEOಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಡಿಜಿ-ಐಜಿ ಹಾಗೂ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದ್ದಾರೆ. ಚುನಾವಣಾ ಆಯೋಗ ಈ ಆರೋಪಗಳ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಿಯೋಗ ಆಗ್ರಹಿಸಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಕ ಅಮಾನತು ಅಮಾನತು ಮಾಡಿದ ಜಿಲ್ಲಾಧಿಕಾರಿ.....17 BEO ಗಳ ವಿರುದ್ಧ FIR ದಾಖಲಿಸಲು ಮನವಿ.....ಅಧಿಕಾರ ದುರುಪಯೋಗ ಮಾಡಿಕೊಂಡ BEO ಗಳ ವಿರುದ್ಧ ಆಕ್ರೋಶ.....ತೂಕ ಇಳಿಸಿಕೊಳ್ಳಲು ಸದಾ ಉತ್ಸಾಹಿಯಾಗಿರಲು ಸರಳ ಉಪಾಯ‌.....ಸುಂದರ ಆರೋಗ್ಯ ಜೀವನಕ್ಕಾಗಿ ಒಂದಿಷ್ಟು ಮಾಹಿತಿ ನಿಮಗಾಗಿ.....ತುಪ್ಪ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಷ್ಟು ತಿನ್ನಬೇಕು.....ತುಪ್ಪದ ಕುರಿತು ನಿಮಗಾಗಿ ಒಂದಿಷ್ಟು ಮಾಹಿತಿ.....ವಾಯುವ್ಯ ಸಾರಿಗೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ.....ಮರುನಾಮಕರಣ ಮಾಡಿ ಘೋಷಣೆ ಮಾಡಿದ CM.....ದೂರು ದಾಖಲಿಸಿದ ಪೊಲೀಸರು..... ತನಿಖೆ ಕೈಗೊಂಡ ಪೊಲೀಸರು.....ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಹೊಸ ಹೆಜ್ಜೆ ಇಟ್ಟ ಸರ್ಕಾರ.....ಶಾಲೆ ಚಿತ್ರಣ ಬದಲಾಯಿಸಿದ ಶಿಕ್ಷಕರು.....ಸರ್ಕಾರಿ ಶಾಲಾ ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ.....1000 ಕೊಟ್ಟರೆ ಸಾಕು ಬಿಂದಾಸ್ ಪರೀಕ್ಷೆ ಬರೆಯಲು ಅವಕಾಶ..... ರಾಜ್ಯದಲ್ಲಿ ಮತ್ತೊಂದು ಪರೀಕ್ಷಾ ಕರ್ಮ ಕಾಂಡ.....ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನ.....ಪ್ರಾಥಮಿಕ ಶಾಲಾ ಮಕ್ಕಳಿಗೆ ವಯಸ್ಕರ ಗಾತ್ರದ ಪಾದರಕ್ಷೆ ವಿತರಣೆ ಭುಗಿಲೆದ್ದ ಆಕ್ರೋಶ.....