ಬೆಂಗಳೂರು -
ದೀಪಾವಳಿ ಹೊತ್ತಲ್ಲೇ ಕೇಂದ್ರ ಸರಕಾರ ತನ್ನ ನೌಕರರಿಗೆತುಟ್ಟಿಭತ್ಯೆ (DA) ಸೌಲಭ್ಯ ಒದಗಿಸಲು ಸಜ್ಜಾಗಿದೆ. ಕೇರಳ ಹಾಗೂ ಹಿಮಾಚಲ ಪ್ರದೇಶ ಸರಕಾರಗಳು ತಮ್ಮ ನೌಕರರಿಗೆ ತುಟ್ಟಿಭತ್ಯೆ (DA) ಹೆಚ್ಚಳ ಮಾಡಿವೆ. ಈ ನಡುವಲ್ಲೇ ಕರ್ನಾಟಕದ ಸರಕಾರಿ ನೌಕರರಿಗೂ ತುಟ್ಟಿಭತ್ಯೆ ಹೆಚ್ಚಳದ ಖುಷಿ ಸಿಗಲಿದೆ.2026ರ ಜನವರಿ 1 ರಿಂದಲೇ ತುಟ್ಟಿಭತ್ಯೆ ಯನ್ನು ಹೆಚ್ಚಳ ಮಾಡಲಾಗಿತ್ತು ಕರ್ನಾಟಕ ಸರಕಾರ ತನ್ನ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 14.25% ರಿಂದ 15.75% ಕ್ಕೆ ಏರಿಕೆ ಮಾಡಿತ್ತು
ಈ ಆದೇಶ ದಿಂದಾಗಿ ಕರ್ನಾಟಕ ಸರಕಾರದ ಖಾಯಂ ನೌಕರರು, ನಿವೃತ್ತ ನೌಕರರು (ಪಿಂಚಣಿ ದಾರರು) ಹಾಗೂ ಕುಟುಂಬ ಪಿಂಚಣಿದಾರರಿಗೆ ನೇರವಾಗಿ ಪಿಂಚಣಿಯ ಲಾಭ ದೊರಕಿತ್ತು. ಸಾಮಾನ್ಯ ವಾಗಿ ದೀಪಾವಳಿಯ ಹೊತ್ತಲ್ಲೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲಾಗುತ್ತಿದೆ. ಇದೀಗ ಕೇಂದ್ರ ಸರಕಾರ ಮುಂದಿನ ಕ್ಯಾಬಿನೆಟ್‌ನಲ್ಲಿ ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಮಾಡುವ ಸಾಧ್ಯತೆಯಿದೆ.
ಕೇರಳದ ಕಾಂಗ್ರೆಸ್ ಸರಕಾರ ಈಗಾಗಲೇ ತುಟ್ಟಿಭತ್ಯೆ ಹೆಚ್ಚಿಸಿದ್ದು, ಹಿಮಾಚಲ ಪ್ರದೇಶದಲ್ಲಿಯೂ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಖುಷಿ ಸಿಕ್ಕಿದೆ.ದಸರಾ ಬೆನ್ನಲ್ಲೇ ಕರ್ನಾಟಕದ ಸರಕಾರಿ ನೌಕರರು ಕೂಡ ಈ ಬಾರಿ ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ ಅಗತ್ಯ ವಸ್ತು ಗಳಾದ ಅಡುಗೆ ಎಣ್ಣೆ, ತರಕಾರಿ ಇಂಧನದ ಬೆಲೆಗಳು ಗಗನಕ್ಕೇರಿವೆ. ಇದೀಗ ಸರಕಾರಿ ನೌಕರರು ಮತ್ತು ಪಿಂಚಣಿ ದಾರರಿಗೆ ಆರ್ಥಿಕ ಹೊರೆಯನ್ನು ತಪ್ಪಿಸುವ ಸಲುವಾಗಿ ತುಟ್ಟಿಭತ್ಯೆಯನ್ನು ರಾಜ್ಯ ಸರಕಾರ ಹೆಚ್ಚಳ ಮಾಡಲಿದೆ.
ದೀಪಾವಳಿಗೂ ಮುನ್ನ ನಡೆಯುವ ಕ್ಯಾಬಿನೆಟ್ ಸಭೆ ಯಲ್ಲಿ ಈ ಕುರಿತು ತೀರ್ಮಾನವಾಗುವ ಸಾಧ್ಯತೆಯಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ತುಟ್ಟಿ ಭತ್ಯೆ ಹೆಚ್ಚಳ ಬಿಗ್ ರಿಲೀಫ್ ನೀಡಲಿದೆ. ರಾಜ್ಯ ಸರಕಾರ ಈ ಬಾರಿ ಎಷ್ಟು ಪ್ರತಿಶತ ತುಟ್ಟಿಭತ್ಯೆ (DA) ಹೆಚ್ಚಳ ಮಾಡಲಿದೆ ಅನ್ನೋದು ಇನ್ನೂ ಖಚಿತ ವಾಗಿಲ್ಲ. ಆದರೆ ಸರಕಾರಿ ನೌಕರರ ಸಂಘ ರಾಜ್ಯ ಸರಕಾರ ಅತೀ ಹೆಚ್ಚು ತುಟ್ಟಿಭತ್ಯೆ (DA) ಹೆಚ್ಚಳದ ನಿರೀಕ್ಷೆಯಲ್ಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....