ಹುಕ್ಕೇರಿ -
ಶಿಕ್ಷಕರೊಬ್ಬರ ಮನೆ ಕಳ್ಳತನ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಯಲ್ಲಿ ನಡೆದಿದೆ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ಶಿಕ್ಷಕ ಮಹಾಂತೇಶ ಪೂಜೇರಿ ಅವರ ಮನೆಯ ಬೀಗ ಮುರಿದು ಮನೆ ಯಲ್ಲಿದ್ದ 18 ತೊಲೆ ಬೆಳ್ಳಿ ಹಾಗೂ 20 ಸಾವಿರ ನಗದು ಹಣ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಶಾಲೆಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮ ವಾದ ಕಿತ್ತೂರು ತಾಲೂಕಿನ ಶಿವನೂರು ಗ್ರಾಮಕ್ಕೆ ಮನೆ ಮಾಲೀಕರು ತೆರಳಿದ್ದರು.ಶಾಲೆಗಳು ಪುನರಾರಂ ಭಗೊಂಡ ಹಿನ್ನಲೆ ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುದ್ದಿ ಸಂತೆ ನ್ಯೂಸ್ ಹುಕ್ಕೇರಿ......