LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸಾವು ಗೆದ್ದ ಸರ್ಕಾರಿ ಶಾಲಾ ಶಿಕ್ಷಕ.....ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ.....

ಕಂಧಮಾಲ್ -

ಒಡಿಶಾ ರಾಜ್ಯದ ಕಂಧಮಾಲ್ ಜಿಲ್ಲೆಯಲ್ಲಿ ಸಂಭವಿ ಸಿದ ಭೀಕರ ಭೂಕುಸಿತದ ವೇಳೆ ಕಂದಕಕ್ಕೆ ಬಿದ್ದು ನಾಪತ್ತೆಯಾಗಿದ್ದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಬರೋಬ್ಬರಿ 14 ದಿನಗಳ ಬಳಿಕ ಪವಾಡಸದೃಶವಾಗಿ ಜೀವಂತವಾಗಿ ಪತ್ತೆಯಾಗಿದ್ದಾರೆ ದಂಗಾಸಿ ಗ್ರಾಮದ ಬಳಿ ಜಾನುವಾರು ಮೇಯಿಸಲು ತೆರಳಿದ್ದ ದನ ಕಾಯುವವನೊಬ್ಬನಿಗೆ ಶಿಕ್ಷಕನ ಕ್ಷೀಣ ಧ್ವನಿ ಕೇಳಿಸಿದ್ದು ತಕ್ಷಣ ಗ್ರಾಮಸ್ಥರ ಸಹಾಯದಿಂದ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಕ್ಟೋಬರ್ 29ರ ರಾತ್ರಿ ಸುರಿದ ಭಾರಿ ಮಳೆಯಿಂ ದಾಗಿ ದಂಗಾಸಿ ಗ್ರಾಮದಲ್ಲಿ ಭಾರೀ ಭೂಕುಸಿತ ಸಂಭವಿಸಿತ್ತು. ಈ ವೇಳೆ ಗ್ರಾಮದ ಕಡೆಗೆ ತೆರಳುತ್ತಿದ್ದ ಇಂದ್ರಗಢ ಪಂಚಾಯತ್‌ನ ಶಾಲಾ ಶಿಕ್ಷಕ ಮೋಹನ್ ಮಹಾರಾಣಾ ಕತ್ತಲಲ್ಲಿ ಆಕಸ್ಮಿಕವಾಗಿ ಸಮೀಪದ ಗುಡ್ಡದ ಕೆಳಗಿನ ಆಳವಾದ ಕಂದಕಕ್ಕೆ ಬಿದ್ದಿದ್ದರು. ಸುತ್ತಲೂ ದಟ್ಟ ಕಾಡಿದ್ದು, ಯಾರೂ ಇಲ್ಲದ ಕಾರಣ ಅವರ ಸಹಾಯದ ಕೂಗು ಯಾರಿಗೂ ಕೇಳಿಸಿರಲಿಲ್ಲ. ಸತತ 14 ದಿನಗಳ ಕಾಲ ಯಾವುದೇ ಆಹಾರವಿಲ್ಲದೆ ಕಂದಕದಲ್ಲಿ ಸಂಗ್ರಹವಾಗಿದ್ದ ಮಣ್ಣು ಮಿಶ್ರಿತ ಮಳೆ ನೀರನ್ನೇ ಕುಡಿಯುತ್ತಾ ಅವರು ಜೀವ ಉಳಿಸಿ ಕೊಳ್ಳು ವಲ್ಲಿ ಯಶಸ್ವಿಯಾಗಿದ್ದಾರೆ.

ಪವಾಡಸದೃಶ ರಕ್ಷಣೆ 14 ದಿನಗಳ ಕಾಲ ಕುಟುಂಬಸ್ಥ ರು ಹಾಗೂ ಪೊಲೀಸರು ನಡೆಸಿದ ಹುಡುಕಾಟ ವಿಫಲವಾಗಿತ್ತು ದನ ಕಾಯುವವನೊಬ್ಬ ಕಂದಕದ ಬಳಿ ಹೋದಾಗ ಕೇಳಿಸಿದ ಕ್ಷೀಣ ಧ್ವನಿಯಿಂದ ಈ ವಿಷಯ ಬೆಳಕಿಗೆ ಬಂದಿದೆ.18 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಾಟ ಶಿಕ್ಷಕ ಗಂಭೀರ ಸ್ಥಿತಿಯಲ್ಲಿದ್ದ ಕಾರಣ, ಗ್ರಾಮಸ್ಥರು ಒಟ್ಟಾಗಿ ಸೇರಿ ಆತನನ್ನು ಬಿದಿರಿನ ಹಂಗಾಮಿ ಸ್ಟ್ರೇಚರ್ ಮೇಲೆ ಮಲಗಿಸಿ ಸುಮಾರು 18 ಕಿಲೋಮೀಟರ್ ದೂರದವರೆಗೆ ನಡೆದುಕೊಂಡೇ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶಿಕ್ಷಕರ ಆರೋಗ್ಯ ಸ್ಥಿತಿ ಗಂಭೀರ ಸುದೀರ್ಘ ಕಾಲ ಆಹಾರವಿಲ್ಲದೆ ಕಂದಕದಲ್ಲಿ ನರಳಿದ್ದರಿಂದ ಮತ್ತು ಮಣ್ಣು ಮಿಶ್ರಿತ ನೀರನ್ನು ಸೇವಿಸಿದ್ದರಿಂದ ಮೋಹನ್ ಮಹಾರಾಣಾ ಅವರ ಆರೋಗ್ಯ ಗಂಭೀರವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಸುದ್ದಿ ಸಂತೆ ನ್ಯೂಸ್ ಬಿಹಾರ್.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಷ ಸೇವಸಿ ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ಮಹಿಳಾ ಅಧಿಕಾರಿ..... ಸಾವು ಗೆದ್ದ ಸರ್ಕಾರಿ ಶಾಲಾ ಶಿಕ್ಷಕ.....ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ..... ಸರ್ಕಾರಿ ಶಾಲಾ ಮುಖ್ಯಶಿಕ್ಷಕ ಅಮಾನತು.....ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಡೆವಲಪರ್ ಸಮಾಜ ಸೇವಕ ವಿರೇಶ್ ಬ್ಯಾಹಟ್ಟಿ.....ತೀವ್ರ ಕುತೂಹಲ ಕೆರಳಿಸಿದ ಸಚಿವರ ಭೇಟಿ.....ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಹೊಸ ವಿನ್ಯಾಸದ ಸಮವಸ್ತ್ರ.....20 ಕ್ಕೂ ಹೆಚ್ಚು KAS ಅಧಿಕಾರಿಗಳ ವರ್ಗಾವಣೆ.....ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ ರಾಜ್ಯ ಸರ್ಕಾರ.....ನೆಚ್ಚಿನ ಗ್ರಾಹಕರಿಗೆ ಧನ್ಯವಾದ ಹೇಳಿದ Big Mishra ಸಂಸ್ಥೆ..... ಬೆಂಬಲಿಸಿದ ಗ್ರಾಹಕರಿಗೆ ಧನ್ಯವಾದ ಹೇಳಿದ ಸಂಜಯ ಮಿಶ್ರಾ.....ಶಿಕ್ಷಣ ಇಲಾಖೆಯಿಂದ ಕ್ಲಸ್ಟರ್ ಕಿಚನ್ ಪ್ರಸ್ತಾವನೆಗೆ ಆರಂಭಿದಲ್ಲೇ ವಿರೋಧ ಮನವಿ ಸಲ್ಲಿಕೆ.....ಶಿಕ್ಷಣ ಇಲಾಖೆಯಿಂದ ಕ್ಲಸ್ಟರ್ ಕಿಚನ್ ಪ್ರಸ್ತಾವನೆಗೆ ಆರಂಭಿದಲ್ಲೇ ವಿರೋಧ ಮನವಿ ಸಲ್ಲಿಕೆ.....8ನೇ ವೇತನ ಆಯೋಗದಲ್ಲಿ ಸರ್ಕಾರಿ ನೌಕರರಿಗೆ ಲಾಟರಿ.....ಮಹತ್ವದ ಅಪ್ಡೇಟ್.....