LIVE TV LocalCrimeNationalInternationalPoliticsEducationTechnologyEntertainmentSportsFeature
State News

ನಿವೃತ್ತಿಯಾದ ಮುಖ್ಯಶಿಕ್ಷಕ.....ಒಂದೇ ಶಾಲೆಯಲ್ಲಿ 27 ವರ್ಷಗಳ ಕಾಲ ಸೇವೆ ಸಲ್ಲಿಕೆ.....

ಕೋಲಾರ -

ಸುದೀರ್ಘ 26 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಕೋಲಾರ ತಾಲ್ಲೂಕಿನ ಬಟ್ರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯ ಹೆಚ್. ಎಂ. ಕೃಷ್ಣಪ್ಪನವರನ್ನು ಬೀಳ್ಕೊಡಲಾಯಿತು.

ತಮ್ಮ ನೆಚ್ಚಿನ ಶಿಕ್ಷಕ ಸೇವಾ ನೀವೃತ್ತಿಯನ್ನು ಹಳೆಯ ವಿದ್ಯಾರ್ಥಿಗಳು ಮುಖಂಡರು ಹಾಗೂ ಗ್ರಾಮಸ್ಥರು ಸೇರಿ ಬೆಳ್ಳಿ ರಥದಲ್ಲಿ ಅದ್ದೂರಿ ಮೆರವಣಿಗೆ ಮಾಡಿ ಬೀಳ್ಕೊಡುವ ಮೂಲಕ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಭಟ್ರಹಳ್ಳಿ ಗೇಟ್ ದಿಂದ ಶಾಲೆಯವರೆಗೆ ಕೃಷ್ಣಪ್ಪ ಮೇಸ್ಟ್ರನ್ನು ಬೆಳ್ಳಿ ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ನಡೆಸಲಾಯಿತು. ಡೊಳ್ಳು ಕುಣಿತ, ತಮಟೆ ನಾದ ಹಾಗೂ ಊರಿನ ಜನತೆಯ ಹೂಮಳೆಯ ಆರ್ಭಟ ಮುಗಿಲು ಮುಟ್ಟಿತ್ತು. ಊರಿನ ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದ ಜನಸ್ತೋಮ ಜಯಘೋಷ ಕೂಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿ ಸಿದರು

ತರಗತಿಯಲ್ಲಿ ಶಿಸ್ತಿನಿಂದ ಪಾಠ ಮಾಡುತ್ತಾ, ಪ್ರೀತಿ ಯಿಂದ ತಿದ್ದಿ ತೀಡಿದ ಮೇಸ್ಟ್ರು ಸೇವಾ ನಿವೃತ್ತಿಯ ಕ್ಷಣ ಎದುರಾದಾಗ ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾವುಕರಾಗಿ ಕಣ್ಣೀರಾದರು. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಈ ಅಪಾರ ಪ್ರೀತಿಯನ್ನು ಕಂಡು ಕೃಷ್ಣಪ್ಪ ಮೇಸ್ಟ್ರು ಸಹ ಕಣ್ಣೀರು ಸುರಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅನೀಲ್ ಕುಮಾರ್ ಮಾತನಾಡಿ, ಕೃಷ್ಣಪ್ಪ ಅವರು ವರ್ಗಾವಣೆಯಾಗಿ ಬಂದ ಮೇಲಿಂದ ಈ ಭಾಗದ ಸಿಆರ್ಪಿ, ಇಸಿಒ, ಬಿಇಒ ಹಂತದಯಾವುದೇ ಕಾರ್ಯಕ್ರಮಗಳಿರಲಿ,ಮೊದಲು ನೆನಪಿಗೆಬರುವುದೇ ಖಜಾಂಚಿ ಕೃಷ್ಣಪ್ಪ ಅವರ ಹೆಸರು. ಅವರು ಎಂದಿಗೂ ಇಲ್ಲ ಎನ್ನದೆ ನಿರಂತರವಾಗಿ ಇಲಾಖೆಯೊಂದಿಗೆ ಕೈಜೋಡಿಸಿ ಪ್ರತಿಯೊಂದು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ ಅಲ್ಲದೆ ಕಳೆದ 27 ವರ್ಷ ಗಳಿಂದಲೂ ಅವರು ನಮ್ಮ ಸಂಘಟನೆಯಲ್ಲಿ ಖಜಾಂಚಿಯಾಗಿ ಹಾಗೂ ಸಕ್ರಿಯ ನಾಯಕರಾಗಿ ಜೊತೆಯಲ್ಲಿದ್ದಾರೆ. ಸಂಘದ ಬೆಳವಣಿಗೆಗೆ ಮತ್ತು ಶಿಕ್ಷಕರ ಹಿತರಕ್ಷಣೆಗೆ ಅವರು ನೀಡಿದ ಬೆಂಬಲ ಹಾಗೂ ಅಗಾಧವಾದ ಶಕ್ತಿ ಅಪಾರವಾದದ್ದು. ಎಂದು ಶ್ಲಾಘಿಸಿದರು.

ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯ ದಿನ ಗ್ರಾಮಸ್ಥರಿಂದ ಇಷ್ಟೊಂದು ದೊಡ್ಡ ಮಟ್ಟದ ವೈಭವದ ಸಮಾರಂಭವನ್ನು ಮಾಡಿಸಿಕೊಳ್ಳಬೇಕಾದರೆ ಅವರು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಮನಸ್ಸನ್ನು ಎಷ್ಟು ಗೆದ್ದಿರಬೇಕು ಎಂಬುದು ತಿಳಿಯುತ್ತದೆ. ಎಂದರು.

ಸನ್ಮಾನ ಸ್ವೀಕರಿಸಿ ಭಾವನಾತ್ಮಕವಾಗಿ ಮಾತನಾಡಿದ ಶಿಕ್ಷಕ ಹೆಚ್. ಎಂ. ಕೃಷ್ಣಪ್ಪ ಅವರು ತಮ್ಮ  ಸೇವಾವ ಧಿಯ ನೆನಪುಗಳನ್ನು ಹಂಚಿಕೊಂಡರಲ್ಲದೆ. ಹಳ್ಳಿ ಗಳಲ್ಲಿ ಕೆಲಸ ಮಾಡುವಾಗ ಹಲವು ಸವಾಲುಗಳು ಎದುರಾಗಿದ್ದವು. ಆದರೆ, ಮಕ್ಕಳಿಗೆ ಯಾವುದೇ ರೀತಿಯ ವಂಚನೆಯಾಗದಂತೆ, ಶಾಲೆಯ ಆಡಳಿತ ವನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಬಂದಿದ್ದೇನೆ. ಮಕ್ಕಳನ್ನು ನನ್ನ ಸ್ವಂತ ಕುಟುಂಬದ0ತೆ ಪ್ರೀತಿಸಿ ಕರ್ತವ್ಯ ನಿರ್ವಹಿಸಿದ್ದೇನೆ.ಆರಂಭದಲ್ಲಿ ಶಾಲೆಗೆ ಸೂಕ್ತ ಮೈದಾನವಿರಲಿಲ್ಲ, ರಸ್ತೆಯಲ್ಲೇ ಪ್ರಾರ್ಥನೆ ಮಾಡ ಬೇಕಿತ್ತು. ನಂತರ ಗ್ರಾಮದ ಹಿರಿಯರ ಹಾಗೂ ಗ್ರಾಮಸ್ಥರ ಮನವೊಲಿಸಿ, ಸುಮಾರು ೨೦-೩೦ ಅಡಿ ಆಳವಿದ್ದ ತಿಪ್ಪೆ ಗುಂಡಿಗಳನ್ನು ತೆರವುಗೊಳಿಸಿ, ಮಣ್ಣು ತುಂಬಿಸಿ ಶಾಲೆಗೆ ಉತ್ತಮ ಆಟದ ಮೈದಾನದ ವ್ಯವಸ್ಥೆ ಮಾಡಲಾಯಿತು ಎಂದರು.

ಭಟ್ರರಹಳ್ಳಿಯ ಜನರು ನನ್ನನ್ನು ತಮ್ಮ ಮನೆಯ ಸದಸ್ಯನಂತೆ ಕಂಡಿದ್ದಾರೆ. ಒಬ್ಬನೇ ಒಬ್ಬ ವ್ಯಕ್ತಿಯೂ ನನಗೆ ನೋವಾಗುವಂತೆ ನಡೆದುಕೊಂಡಿಲ್ಲ. ಇಷ್ಟೊಂದು ವಿಜೃಂಭಣೆಯಿಂದ ನನ್ನನ್ನು ಸನ್ಮಾನಿಸಿ ಬೀಳ್ಕೊಡುತ್ತಾರೆ ಎಂದು ನಾನು ಕನಸಿನಲ್ಲೂ ಯೋಚಿಸಿರಲಿಲ್ಲ. ಮುಂದೆಯೂ ನಾನು ನಿಮ್ಮ ಭಟ್ಟರಹಳ್ಳಿಯ ಕೃಷ್ಣಪ್ಪನಾಗಿಯೇ ಇರುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಜಿ ಶ್ರೀರಾಮಯ್ಯ ವಹಿಸಿದ್ದರು. ಗ್ರಾಮದ ಮುಖಂಡರುಗಳಾದ ಬಿವಿ ಅಶೋಕ್, ಎನ್.ವಿ ಚಲಪತಿ. ಸೇರಿದಂತೆ ಗ್ರಾಮದ ಹಿರಿಯ ಮುಖಂಡರು ಹಾಗೂ ಹಳೆಯ ವಿದ್ಯಾರ್ಥಿ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿ ಸಂತೆ ನ್ಯೂಸ್ ಕೋಲಾರ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿವೃತ್ತಿ ಯೋಜನೆಗೆ ಬಂತು 15 ಮಹತ್ವದ ಬದಲಾವಣೆಗಳು.....ಸರ್ಕಾರಿ ನೌಕರರಿಗೆ ದಸರಾಗೂ ಮೊದಲೇ ತುಟ್ಟಿಭತ್ಯೆ.....Big Update.....ದಯಮಾಡಿ ಶಿಕ್ಷಕರ ವರ್ಗಾವಣೆ ಮಾಡಿ‌ ಮಾಡಿ ಆರಂಭಗೊಂಡ ಅಭಿಯಾನ‌.....ನೂತ‌ನ CEO ರನ್ನು ಸ್ವಾಗತ ಕೋರಿದ ಸರ್ಕಾರಿ ನೌಕರರ ಟೀಮ್.....ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ಜನವರಿ 1, 2026 ರಿಂದ ಬಾಕಿ ವೇತನ ಇಲ್ಲಿದೆ ಲೆಕ್ಕಾಚಾರ.....ರಾಜ್ಯ ಸರ್ಕಾರಿ ನೌಕರರ ಮಹತ್ವದ ಸಭೆ..... ನಿವೃತ್ತಿಯಾದ ನೌಕರರಿಗೆ ಸನ್ಮಾನ ಗೌರವ.... ‌ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಬಜೆಟ್ ಕುಸಿತ.....ಆತಂಕದಲ್ಲಿ ಕ್ಷೇತ್ರ.....ಶಿಕ್ಷಕಿ ಪೊಟೊ ಗಳು ವೈರಲ್.....ಶಾಲೆಯಲ್ಲಿ ಶಿಕ್ಷಕಿ ಮಾಡಿದ ಕೆಲಸ ನೋಡಿ.....ಶಾಲೆಗಳಲ್ಲಿ ಹೆಚ್ಚುವರಿ ವಿಭಾಗ ಆರಂಭಕ್ಕೆ ಅರ್ಜಿ ಆಹ್ವಾನ.....ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘಕ್ಕೆ ನೂತನ ಪದಾರ್ಥಗಳ ಆಯ್ಕೆ.....