LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ.....ನೋಟಿಸ್ ಜಾರಿ ಮಾಡಿದ CEO.....

ಬಾಗಲಕೋಟೆ -

ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಹೌದು ಬಾಗಲಕೋಟೆ ಯ ನಗರದ ವಾಂಬೆ ಕಾಲನಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ ದಲ್ಲಿ ಕೇಂದ್ರದ ಮುಂಭಾಗದಲ್ಲಿ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ನಿಂತಿರುವುದು ಹಾಗೂ ತೀವ್ರ ಅಸ್ವಚ್ಛತೆ ಕಂಡುಬಂದಿದ್ದು, ಸಣ್ಣ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದು ಗಂಭೀರ ನಿರ್ಲಕ್ಷ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಗಜಾನನ ಬಾಲೆ  ಅಧಿಕಾರಿಗಳಿಗೆ ಸ್ಥಳದಲ್ಲಿ ಯೇ ಶೋಕಾಸ್ ನೋಟಿಸ್ ಜಾರಿಗೊಳಿಸಿದರು.

ನಗರದ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಸಾರ್ವಜನಿಕ ಆರೋಗ್ಯ, ನೈರ್ಮಲ್ಯ, ಶಿಕ್ಷಣ ಹಾಗೂ ಮೂಲಸೌಕರ್ಯ ವ್ಯವಸ್ಥೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಅಂಗನವಾಡಿ ಮುಂಭಾಗದಲ್ಲಿ ಅಸ್ವಚ್ಚತೆ ಕಂಡುಬಂದಿತು. ಈ ಹಿನ್ನಲೆ ಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಬಾಗಲಕೋಟೆ ಸಿಡಿಪಿಒ, ವೃತ್ತ ಮೇಲ್ವಿಚಾರಕರು ಹಾಗೂ ಅಂಗನವಾಡಿ ಕಾರ್ಯಕರ್ತೆಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ಅಲ್ಲದೆ ಚರಂಡಿ ತಡೆಯನ್ನು ತಕ್ಷಣ ತೆರವುಗೊಳಿಸಿ, ಅಂಗನವಾಡಿ ಸುತ್ತಮುತ್ತ ಸ್ವಚ್ಛತೆ ಹಾಗೂ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸುದ್ದಿ ಸಂತೆ ನ್ಯೂಸ್ ಬಾಗಲಕೋಟೆ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗರಗ ಸರ್ಕಲ್‌ಗೆ ಹೊಸ ಸಾರಥಿ.....CPI ಮಹಮ್ಮದ್ ರಫೀಕ್ ಅಧಿಕಾರ ಸ್ವೀಕಾರ.....ನವೆಂಬರ್ 3 ರಿಂದ ಶಾಲೆಗಳು ಬಂದ್..... ಬಂದ್ ಎಚ್ಚರಿಕೆ ನೀಡಿದ ಬಸವರಾಜ ಹೊರಟ್ಟಿ.....ರಾಜ್ಯಾಧ್ಯಕ್ಷ ಷಡಾಕ್ಷರಿ ಯವರಿಗೆ ಪತ್ರ ಬರೆದ ರಾಜ್ಯದ ಶಿಕ್ಷಕರು.....ವರ್ಗಾವಣೆ ಸೇರಿದಂತೆ ಹತ್ತಾರು ವಿಚಾರ ಗಳ ಕುರಿತು ಪತ್ರದಲ್ಲಿ ಉಲ್ಲೇಖ.....OPS ಮರು ಜಾರಿಗಾಗಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಭೇಟಿಯಾದ ರಾಜ್ಯ ಸರ್ಕಾರಿ ನೌಕರರ ನಿಯೋಗ.....CS ಜೊತೆ ಮಹತ್ವದ ಸಭೆ ಮರು ಜಾರಿಗೆ ಆಗ್ರಹ.....ಸರ್ಕಾರಿ ಅಧಿಕಾರಿ ಸುರೇಶಬಾಬು‌ ಅಮಾನತು..... ಅಮಾನತು ಆದೇಶ ಹೊರಡಿಸಿದ‌ ಆಯುಕ್ತರು.....ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ.....50 ಲಕ್ಷ ತಗೆದುಕೊಳ್ಳುವಾಗ ಲಾಕ್.....ರಾಜ್ಯದಲ್ಲಿಯೇ ಬಹುದೊಡ್ಡ ಕಾರ್ಯಾಚರಣೆ.....ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೊಸ ಪಾಠ.....ಶಿಕ್ಷಕರಿಗೆ ಮತ್ತೊಂದು ಹೊರೆ.....ಸರ್ಕಾರಿ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ.....ನೋಟಿಸ್ ಜಾರಿ ಮಾಡಿದ CEO.....ಬೆಳಗಾವಿಯಲ್ಲಿ ಸೆ.24ರಂದು ‘ಬಿಗ್ ಮಿಶ್ರಾ ಪೇಡಾ’ ಗ್ರ್ಯಾಂಡ್ ಓಪನಿಂಗ್.....ಸಂಜಯ ಮಿಶ್ರಾ ಅವರ Big Mishra ಸವಿರುಚಿ ಬೆಳಗಾವಿಯಲ್ಲಿ.....15ನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿ.....ಡೆತ್​ನೋಟ್​​ನಲ್ಲಿತ್ತು ಆಘಾತಕಾರಿ ಅಂಶ.....