LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕ ಕೊಟ್ರಪ್ಪ ಗಡಿಗಿ ಸೇವಾನಿವೃತ್ತಿ ಬೀಳ್ಕೊಡುಗೆ ಸಮಾರಂಭ.....

ಮುನಿರಾಬಾದ್ -

ಸಮೀಪದ ಹೊಸಲಿಂಗಾಪುರ ಗ್ರಾಮದ ಆಶ್ರಯ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೊಟ್ರಪ್ಪ ಗಡಿಗಿ ಸೇವಾನಿವೃತ್ತಿ ಹಿನ್ನೆಲೆ ಶಾಲೆ ಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.ಶಿಕ್ಷಕ ಮಹೇಶ್ ಸದರಿ ಮಾತನಾಡಿ, 'ಕೊಟ್ರಪ್ಪ ಅವರು ಮುನಿರಾಬಾದ್ ಡೈರಿ ಫಾರಂ ಶಾಲೆಗೆ ನಿವೇಶನ ದೊರಕಿಸಿಕೊಂಡು ಇಲಾಖೆಯಿಂದ ಹೊಸ ಕಟ್ಟಡ ನಿರ್ಮಿಸುವಲ್ಲಿ, ಗಂಗಾವತಿ ತಾಲ್ಲೂಕಿನ ಡಣಕನಕಲ್ ಶಾಲೆಗೆ ಎರಡು ಎಕರೆ ಆಟದ ಮೈದಾನ ದೊರಕಿಸಿ ಕೊಡುವಲ್ಲಿ ಶ್ರಮಿಸಿದ್ದಾರೆ.

ಶಿಕ್ಷಕರ ಸಂಘದ ನಿರ್ದೇಶಕರಾಗಿ ವಲಯ ಸಂಪನ್ಮೂಲ ವ್ಯಕ್ತಿಗಳಾಗಿ ಅವರ ಸೇವೆ ಅನನ್ಯ' ಎಂದರು.ಕೊಟ್ರಪ್ಪ ಗಡಿಗಿ-ಜಯಮಾಲಾ ಶಿಕ್ಷಕ ದಂಪತಿಯನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಪರಸಪ್ಪ ಕಂಬಳಿ, ಸುರೇಶ್ ಬೇನಳ್ಳಿ ಇತರರು ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯಂ, ಮುಖ್ಯಶಿಕ್ಷಕಿ ಎಚ್.ಶಾರದಾ, ಮಂಜುನಾಥ ಕಟ್ಟಿ, ಅಶೋಕ ಗೋನಾಳ, ವಸಂತ ನಾಯಕ, ಜಗದೀಶ್ ಕರ್ಕಿಹಳ್ಳಿ, ಸದ್ದಾಂ ಹುಸೇನ್ ಕಳ್ಳಿಮನಿ, ನಾಗೇಶ, ಅಂಬರೀಶ್ ಇದ್ದರು ಅಂದಾನ ಗೌಡ ನಿರೂಪಿಸಿದರು. ಎಸ್.ಪಿ. ಗೀತಾ ವಂದಿಸಿದರು.

ಸುದ್ದಿ ಸಂತೆ ನ್ಯೂಸ್ ಮುನಿರಾಬಾದ್.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನವೆಂಬರ್ 18 ರಿಂದ ಶಾಲಾ-ಕಾಲೇಜು ಬಂದ್‌ಗೆ ಕರೆ.....ಬಂದ್ ಗೆ ಕರೆ ನೀಡಿದ ಹೋರಾಟ ಸಮನ್ವಯ ಸಮಿತಿ.....ಲೋಕಾಯುಕ್ತ ಬಲೆಗೆ ಬಿದ್ದ ಮೂವರು ಸರ್ಕಾರಿ ನೌಕರರು.....ವೇತನಕ್ಕೆ ತಕ್ಕ ಬದ್ಧತೆ ತೋರಿಸಿ ಸರ್ಕಾರಿ ಶಿಕ್ಷಕರಿಗೆ ಸಿಎಂ ಕಿವಿಮಾತು.....ಉಚಿತ ಹೋಮ್ ಡೆಲಿವರಿ.....ಗ್ರಾಹಕರಿಗೆ Big Mishra ದೀಪಾವಳಿ ಹಬ್ಬದ ಸಿಹಿ ಕೊಡುಗೆ.....ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ ಹೃದಯಾಘಾತಕ್ಕೆ ಬಲಿ.....ಕಂಬನಿ ಮಿಡಿದ ನಾಡಿನ ಶಿಕ್ಷಕ ಬಂಧುಗಳು.....ರಾಜ್ಯ ಸರ್ಕಾರಿ ನೌಕರರಿಗೆಸಂತಸವನ್ನುಂಟು ಮಾಡಿದ CM ಒಪ್ಪಿಗೆ..... ಖಾಸಗಿ ಶಾಲೆಗಳೊಂದಿಗೆ ಸರ್ಕಾರಿ ಶಾಲೆಗಳ ಜೋಡಣೆ..... ಆತಂಕ ತಂದಿಟ್ಟ ಸರ್ಕಾರದ ನಡೆ.....ಬಾಗಲಕೋಟೆ ಅಪರ ಜಿಲ್ಲಾಧಿಕಾರಿಯಾಗಿ ಮಂಜುನಾಥ ಡೊಂಬರ ಅಧಿಕಾರ ಸ್ವೀಕಾರ ಸಹಪಾಠಿಗಳಿಂದ ಆತ್ಮೀಯ ಸನ್ಮಾನ – ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾದ ಸ್ನೇಹಬಳಗ.....ಸರ್ಕಾರಿ ಶಾಲಾ ಮಕ್ಕಳ ಕೆಲಸ ವೈರಲ್..... ರಾಜ್ಯವೇ ಮೆಚ್ಚವಂತಹ ಕೆಲಸ ಮಾಡಿದ ಸರ್ಕಾರಿ ಶಾಲಾ ಮಕ್ಕಳು.....ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಹೊಸ ಜವಾಬ್ದಾರಿ ನೀಡಿದ ಸರ್ಕಾರ..... ಹೊಸ ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ.....