LIVE TV LocalCrimeNationalInternationalPoliticsEducationTechnologyEntertainmentSportsFeature
State News

ಬ್ಯಾಟ್ ನಿಂದ ಹೊಡೆದು ಮಗಳನ್ನು ಕೊಲೆ ಮಾಡಿದ ಶಿಕ್ಷಕ.....

ಮಹಾರಾಷ್ಟ್ರ -

ಟಿವಿ ವೀಕ್ಷಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಕ್ಷುಲ್ಲಕ ಜಗಳವೊಂದು ವಿಕೋಪಕ್ಕೆ ತಿರುಗಿ ಶಿಕ್ಷಕನೊಬ್ಬ ತನ್ನ 17 ವರ್ಷದ ಸ್ವಂತ ಮಗಳನ್ನೇ ಕ್ರಿಕೆಟ್ ಬ್ಯಾಟ್‌ನಿಂದ ಬರ್ಬರವಾಗಿ ಹೊಡೆದು ಕೊಂದಿರುವ ಬೆಚ್ಚಿಬೀಳಿಸುವ ಘಟನೆ ಮಹಾರಾಷ್ಟ್ರ ದಲ್ಲಿ ನಡೆದಿದೆ.ಟಿವಿ ರಿಮೋಟ್‌ಗಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಮನೆ ಯಲ್ಲಿ ಟೆಲಿವಿಷನ್ ವೀಕ್ಷಿಸುವ ವಿಚಾರವಾಗಿ ತಂದೆ ಮತ್ತು ಅಪ್ರಾಪ್ತ ಮಗಳ ನಡುವೆ ವಾಗ್ವಾದ ಆರಂಭ ವಾಗಿದೆ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ತಾರಕಕ್ಕೇರಿದೆ. ಈ ವೇಳೆ ಕೋಪದ ಭರದಲ್ಲಿ ತೀವ್ರ ಆಕ್ರೋಶಗೊಂಡ ತಂದೆ, ಮನೆಯಲ್ಲಿದ್ದ ಕ್ರಿಕೆಟ್ ಬ್ಯಾಟ್ ಕೈಗೆತ್ತಿಕೊಂಡು ಮಗಳ ಮೇಲೆ ಏಕಾಏಕಿ ಮನಬಂದಂತೆ ಹಲ್ಲೆ ನಡೆಸಿದ್ದಾನೆ.ತಲೆಗೆ ಬಲವಾದ ಪೆಟ್ಟು ಬಿದ್ದು ಬಾಲಕಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ

ಕ್ರಿಕೆಟ್ ಬ್ಯಾಟ್‌ನಿಂದ ತಲೆ ಹಾಗೂ ದೇಹದ ಸೂಕ್ಷ್ಮ ಭಾಗಗಳಿಗೆ ಬಲವಾಗಿ ಹೊಡೆದ ಪರಿಣಾಮ ಬಾಲಕಿ ತೀವ್ರ ರಕ್ತಸ್ರಾವದಿಂದ ನೆಲಕ್ಕುರುಳಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ನಡೆಸಲಾಯಿತಾದರೂ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ನೀಡಬೇಕಾದ ವೃತ್ತಿಯಲ್ಲಿದ್ದ ಶಿಕ್ಷಕನೊಬ್ಬ, ಕ್ಷುಲ್ಲಕ ಕಾರಣಕ್ಕಾಗಿ ತನ್ನದೇ ರಕ್ತದ ಕರುಳನ್ನು ಇಷ್ಟೊಂದು ಬರ್ಬರವಾಗಿ ಕೊಲೆ ಮಾಡಿರುವುದು ಸ್ಥಳೀಯರಲ್ಲಿ ತೀವ್ರ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೊಲೆಗೆ ಬಳಸಲಾದ ಕ್ರಿಕೆಟ್ ಬ್ಯಾಟ್ ಅನ್ನು ವಶಪಡಿ ಸಿಕೊಳ್ಳಲಾಗಿದ್ದು ಆರೋಪಿ ತಂದೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸ ಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ವಿಚಾರಣೆ ಹಾಗೂ ತನಿಖೆ ಮುಂದುವರಿ ಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಮಹಾರಾಷ್ಟ್ರ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
6ನೇ ತರಗತಿಯಿಂದ ಮಕ್ಕಳಿಗೆ AI ಪಾಠ....ಸರ್ಕಾರಿ ಶಾಲೆಗಳ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ.....ಮದ್ಯಮುಕ್ತ ಕಂದಕೂರಿನಲ್ಲಿ ಬೃಹತ್ ಪಾದಯಾತ್ರೆ.....ಪೊಲೀಸ್ ಇನ್ಸ್ಪೆಕ್ಟರ್ ವಿಶ್ವನಾಥ ಹಿರೇಗೌಡರ ಟೀಮ್ ಜೊತೆ ಜನರ ಬೃಹತ್ ಜಾಗೃತಿ ನಡಿಗೆ.....ಬ್ಯಾಟ್ ನಿಂದ ಹೊಡೆದು ಮಗಳನ್ನು ಕೊಲೆ ಮಾಡಿದ ಶಿಕ್ಷಕ.....ಕೆರೆಯಲ್ಲಿ ಈಜಾಡಲು ಹೋಗಿ 6ನೇ ತರಗತಿಯ ಮೂವರು ವಿದ್ಯಾರ್ಥಿಗಳು ಸಾವು.....ಶಿಕ್ಷಕರ ಸಮಸ್ಯೆ ಗಳ ಕುರಿತು ಇಲಾಖೆಯ ಆಯುಕ್ತರ ಭೇಟಿಯಾದ KSPSTA ಟೀಮ್.....ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಸರ್ಕಾರಿ ನೌಕರರು.....40K ತಗೆದುಕೊಳ್ಳುವಾಗ ಲಾಕ್.....ಸರ್ಕಾರಿ ನೌಕರರಿಗೆ ಬೆದರಿಕೆ.....ಪೊಲೀಸರ ಬಲೆಗೆ ಬಿದ್ದ RTI ಕಾರ್ಯಕರ್ತ.....ಶಿಕ್ಷಕರ ವರ್ಗಾವಣೆ ಗೆ ಶಿಕ್ಷಣ ಸಚಿವರ ಸ್ಪಂದನೆ.....ಶಿಕ್ಷಣ ಸಚಿವರನ್ನು ಭೇಟಿಯಾದ ಶಿಕ್ಷಕರು.....ಶಿಕ್ಷಣ ಸಚಿವರ ಮನೆಯ ಮುಂದೆ ಶಿಕ್ಷಕರು.....ಪ್ರಭಾರಿ ಮುಖ್ಯಶಿಕ್ಷಕ ಅಮಾನತು..... ಅಮಾನತು ಮಾಡಿ ಆದೇಶ.....