LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ನೌಕರರಿಗೆ ಬೆದರಿಕೆ.....ಪೊಲೀಸರ ಬಲೆಗೆ ಬಿದ್ದ RTI ಕಾರ್ಯಕರ್ತ.....

ಬೆಂಗಳೂರು -

ಸರ್ಕಾರಿ ನೌಕರರಿಗೆ ಬೆದರಿಕೆ ಪೊಲೀಸರ ಬಲೆಗೆ ಬಿದ್ದ RTI ಕಾರ್ಯಕರ್ತ ಮುರಳಿ ಹೌದು ಲೋಕಾ ಯುಕ್ತ ಅಧಿಕಾರಿಗಳ ಸೋಗಿನಲ್ಲಿ ಸರ್ಕಾರಿ ಅಧಿಕಾರಿ ಗಳಿಗೆ ನೋಟಿಸ್ ನೀಡಿ ಬೆದರಿಸಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಆರೋಪಿಯೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ ಬಂಧಿತನನ್ನು ಆರ್‌ಟಿಐ (RTI) ಕಾರ್ಯಕರ್ತ ಮುರಳಿ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿ ಮುರಳಿ ಲೋಕಾಯುಕ್ತ ಸಂಸ್ಥೆಯ ಅಧಿಕೃತ ಲೆಟರ್‌ಹೆಡ್ ಅನ್ನು ನಕಲು ಮಾಡಿಕೊ ಳ್ಳುತ್ತಿದ್ದ ಅದರಲ್ಲಿ ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿರುವಂತೆ ನಕಲಿ ಪತ್ರಗಳನ್ನು ಸಿದ್ಧಪಡಿಸುತ್ತಿದ್ದ ನಂತರ ಆ ಪತ್ರಗಳನ್ನು ಸಂಬಂಧ ಪಟ್ಟ ಇಲಾಖೆಯ ಸರ್ಕಾರಿ ನೌಕರರಿಗೆ ಹಾಗೂ ಅಧಿಕಾರಿಗಳಿಗೆ ಕಳುಹಿಸಿ, ನಿಮ್ಮ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಬೆದರಿಸುತ್ತಿದ್ದ ಲೋಕಾಯುಕ್ತ ಕೇಸ್‌ನಿಂದ ಪಾರು ಮಾಡುವುದಾಗಿ ನಂಬಿಸಿ ಅಧಿಕಾರಿಗಳಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದನಂತೆ

ಆರೋಪಿ ಮುರಳಿ ಕೇವಲ ಲೋಕಾಯುಕ್ತ ಅಧಿಕಾರಿ ಸೋಗು ಮಾತ್ರವಲ್ಲದೆ ತನ್ನ ಬಳಿ ನಕಲಿ ಅರಣ್ಯಾ ಧಿಕಾರಿ ಐಡಿ ಕಾರ್ಡ್ ಅನ್ನೂ ಇಟ್ಟುಕೊಂಡಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ಬಯ ಲಾಗಿದೆ ಈ ನಕಲಿ ಐಡಿ ಕಾರ್ಡ್ ತೋರಿಸಿ ಹಲವು ಕಡೆ ದರ್ಪ ತೋರಿ ಜನಸಾಮಾನ್ಯರು ಮತ್ತು ಅಧಿಕಾರಿಗಳನ್ನು ಯಾಮಾರಿಸುತ್ತಿದ್ದ.

ಮುರಳಿಯ ಈ ವಂಚನೆ ಕೃತ್ಯದ ಬಗ್ಗೆ ಖಚಿತ ಮಾಹಿತಿ ಹಾಗೂ ದೂರು ದಾಖಲಾದ ಬೆನ್ನಲ್ಲೇ ಕಾರ್ಯಾ ಚರಣೆಗೆ ಇಳಿದ ವಿಧಾನಸೌಧ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ನಕಲಿ ದಾಖಲೆಗಳು ಮತ್ತು ಐಡಿ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತ ಇನ್ನೆಷ್ಟು ಜನ ಅಧಿಕಾರಿಗಳಿಗೆ ಇದೇ ರೀತಿ ವಂಚಿಸಿದ್ದಾನೆ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
6ನೇ ತರಗತಿಯಿಂದ ಮಕ್ಕಳಿಗೆ AI ಪಾಠ....ಸರ್ಕಾರಿ ಶಾಲೆಗಳ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ.....ಮದ್ಯಮುಕ್ತ ಕಂದಕೂರಿನಲ್ಲಿ ಬೃಹತ್ ಪಾದಯಾತ್ರೆ.....ಪೊಲೀಸ್ ಇನ್ಸ್ಪೆಕ್ಟರ್ ವಿಶ್ವನಾಥ ಹಿರೇಗೌಡರ ಟೀಮ್ ಜೊತೆ ಜನರ ಬೃಹತ್ ಜಾಗೃತಿ ನಡಿಗೆ.....ಬ್ಯಾಟ್ ನಿಂದ ಹೊಡೆದು ಮಗಳನ್ನು ಕೊಲೆ ಮಾಡಿದ ಶಿಕ್ಷಕ.....ಕೆರೆಯಲ್ಲಿ ಈಜಾಡಲು ಹೋಗಿ 6ನೇ ತರಗತಿಯ ಮೂವರು ವಿದ್ಯಾರ್ಥಿಗಳು ಸಾವು.....ಶಿಕ್ಷಕರ ಸಮಸ್ಯೆ ಗಳ ಕುರಿತು ಇಲಾಖೆಯ ಆಯುಕ್ತರ ಭೇಟಿಯಾದ KSPSTA ಟೀಮ್.....ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಸರ್ಕಾರಿ ನೌಕರರು.....40K ತಗೆದುಕೊಳ್ಳುವಾಗ ಲಾಕ್.....ಸರ್ಕಾರಿ ನೌಕರರಿಗೆ ಬೆದರಿಕೆ.....ಪೊಲೀಸರ ಬಲೆಗೆ ಬಿದ್ದ RTI ಕಾರ್ಯಕರ್ತ.....ಶಿಕ್ಷಕರ ವರ್ಗಾವಣೆ ಗೆ ಶಿಕ್ಷಣ ಸಚಿವರ ಸ್ಪಂದನೆ.....ಶಿಕ್ಷಣ ಸಚಿವರನ್ನು ಭೇಟಿಯಾದ ಶಿಕ್ಷಕರು.....ಶಿಕ್ಷಣ ಸಚಿವರ ಮನೆಯ ಮುಂದೆ ಶಿಕ್ಷಕರು.....ಪ್ರಭಾರಿ ಮುಖ್ಯಶಿಕ್ಷಕ ಅಮಾನತು..... ಅಮಾನತು ಮಾಡಿ ಆದೇಶ.....