ಬೆಂಗಳೂರು -
ವರ್ಗಾವಣೆ ಸೇರಿದಂತೆ ಕೆಲ ಪ್ರಮುಖ ಬೇಡಿಕೆ ಗಳ ಕುರಿತು ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಬೆಂಗಳೂರಿಗೆ ಆಗಮಿಸಿದ್ದಾರೆ ಈಗಾಗಲೇ ನಗರಕ್ಕೆ ಬಂದಿರುವ ಶಿಕ್ಷಕರ ಬಳಗವು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಆಗಮಿಸಿದ್ದಾರೆ
ಕಳೆದ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆ ವಿಚಾರ ಸೇರಿ ಹಲವು ವಿಚಾರ ಗಳ ಕುರಿತು ಸಚಿವರೊಂದಿಗೆ ಶಿಕ್ಷಕರ ನಿಯೋಗ ವು ಸಚಿವರನ್ನು ಭೇಟಿಯಾಗಲಿದೆ.ವರ್ಗಾವಣೆ ಯಾವಾಗ ಎಂಬ ನಿರೀಕ್ಷೆಯಲ್ಲಿದ್ದ ರಾಜ್ಯದ ಶಿಕ್ಷಕರು ಇದೀಗ ಸರ್ಕಾರದ ಗಮನ ಸೆಳೆಯಲು ಬೆಂಗಳೂರಿ ನತ್ತ ಮುಖ ಮಾಡಿದ್ದಾರೆ.ರಾಜ್ಯದ ಮೂಲೆ ಮೂಲೆ ಗಳಿಂದ ಆಗಮಿಸಿರುವ ಶಿಕ್ಷಕರುವರ್ಗಾವಣೆ ಪ್ರಕ್ರಿಯೆ ವಿಳಂಬವಾಗುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕರ ವರ್ಗಾವಣೆಯನ್ನು ಕೂಡಲೇ ಆರಂಭಿಸುವಂತೆ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.


ವರ್ಗಾವಣೆಗಾಗಿ ಹಲವು ದಿನಗಳಿಂದ ಕಾಯುತ್ತಿರುವ ಶಿಕ್ಷಕರ ತಾಳ್ಮೆ ಇದೀಗ ಕಟ್ಟೆಯೊಡೆದಿದೆ. ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ನಿರಂತರ ವಿಳಂಬ ನಿರಾಸೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಶಿಕ್ಷಕರು ಬೆಂಗಳೂರಿಗೆ ಆಗಮಿಸಿ ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಧಾರ ಕೈಗೊಂಡಿದ್ದಾರೆ.ಇನ್ನೆಷ್ಟು ದಿನ ಕಾಯಬೇಕು?’ ಎಂಬ ಪ್ರಶ್ನೆ ಶಿಕ್ಷಕರಿಂದ ಕೇಳಿ ಬರುತ್ತಿದ್ದು, ವರ್ಗಾವಣೆ ಪ್ರಕ್ರಿಯೆಗೆ ದಿನಾಂಕ ನಿಗದಿ ಮಾಡಿ ಕೂಡಲೇ ಚಾಲನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಶಿಕ್ಷಕರ ನಿಯೋಜನೆ, ಸೇವಾ ಸ್ಥಳ ಮತ್ತು ಕುಟುಂಬದ ಪರಿಸ್ಥಿತಿಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ವರ್ಗಾವಣೆ ಪ್ರಮುಖ ಪರಿಹಾರವಾಗಿದ್ದು, ಪ್ರಕ್ರಿಯೆ ವಿಳಂಬದಿಂದ ಅನೇಕ ಶಿಕ್ಷಕರು ಸಂಕಷ್ಟ ಎದುರಿ ಸುತ್ತಿದ್ದಾರೆ. ಹೀಗಾಗಿ ಸರ್ಕಾರ ತಕ್ಷಣ ಕ್ರಮಕೈಗೊಂಡು ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು ಎಂಬುದು ಶಿಕ್ಷಕರ ಒಕ್ಕೊರಲಿನ ಒತ್ತಾಯವಾಗಿದೆ.
ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಲಿರುವ ಶಿಕ್ಷಕರು ಈ ಬಾರಿ ಸ್ಪಷ್ಟ ಭರವಸೆ ಪಡೆದೇ ಹಿಂತಿರುಗುವ ನಿರೀಕ್ಷೆಯಲ್ಲಿದ್ದಾರೆ.ವಿಳಂಬ ಬೇಡ, ವರ್ಗಾವಣೆ ಆರಂಭಿಸಿ ಎಂದು ಒತ್ತಾಯ ಮಾಡಲಿದ್ದು ಸಧ್ಯ ಭೇಟಿ ಗಾಗಿ ಸಚಿವರ ಮನೆಯ ಮುಂದೆ ಕಾಯ್ತಾ ಇದ್ದಾರೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....