ಹುಬ್ಬಳ್ಳಿ ಧಾರವಾಡ –
ಓಮೈಕ್ರಾನ್ ವೈರಸ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ನೈಟ್ ಕರ್ಫ್ಯೂ ನಿರ್ಧಾರ ಇಂದಿ ನಿಂದಲೇ ಜಾರಿಯಾಗಲಿದ್ದು, ಈಗಾಗಲೇ ಪೊಲೀಸ್ ಸಿಬ್ಬಂದಿಗಳು ಫೀಲ್ಡ್ ಗೆ ಇಳಿದಿದ್ದಾರೆ.
ಹೌದು.. ಇಂದಿನಿಂದ ನೈಟ್ ಕರ್ಪ್ಯೂ ಹಿನ್ನಲೆಯಲ್ಲಿ ಒಂದು ಗಂಟೆಗೆ ಮುಂಚೆಯೇ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಪೊಲೀಸರು ಫೀಲ್ಡ್ಗಿಳಿದಿದ್ದಾರೆ ಪೊಲೀಸರು, ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಜನರಿಗೆ ಎಚ್ಚರಿಕೆ ನೀಡುತ್ತಿ ದ್ದಾರೆ ಇತ್ತ ಧಾರವಾಡ ದಲ್ಲೂ ಕೂಡಾ ವಿದ್ಯಾಗಿರಿ ಪೊಲೀಸರು ಕೂಡಾ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ
ಬೇಗ ಮನೆ ಸೇರಿಕೊಳ್ಳವಂತೆ ಸೂಚನೆ ನೀಡುತ್ತಿರುವ ಖಾಕಿ ಪಡೆ,ವಾಹನದಲ್ಲಿ ಮೈಕ್ ಮುಖಾಂತರ ಸಂಗೊಳ್ಳಿ ರಾಯಣ್ಣ ವೃತ್ತ, ಕೋರ್ಟ್ ವೃತ್ತ, ದಾಜಿಪಾನಪೇಟ್ ಜನತಾ ಬಜಾರ್ ಅಂಗಡಿ ಮುಂಗ್ಗಟ್ಟುಗಳನ್ನು ಮುಂಚು ವಂತೆ ತಾಕೀತು ಮಾಡಿದ್ದಾರೆ.ಇತ್ತ ಧಾರವಾಡ ದಲ್ಲೂ ಕೂಡಾ ಇದೇ ಚಿತ್ರಣ ಕಂಡು ಬಂದಿತು.