ಧಾರವಾಡ –
ಧಾರವಾಡ ತಹಶಿಲ್ದಾರ ಸಂತೋಷ ಬಿರಾದಾರ ಅವರು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಇಂದಿನಿಂದ ರಾತ್ರಿ ಕರ್ಪ್ಯೂ ಜಾರಿ ಸಲುವಾಗಿ ವಿಧಿಸಿ ರುವ ಕಲಂ 144 ರ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾ ಗಿ ಅನುಷ್ಠಾನ ಗೊಳಿಸಿರುವದರ ಕುರಿತು ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಹಾಗೂ ಸುಪರ್ ಮಾರ್ಕೆಟ್, ಸುಭಾಸ್ ರಸ್ತೆ, ಲೈನ್ ಬಜಾರ, ಟಿಕಾರೆ ರಸ್ತೆ, ಶಿವಾಜಿ ಸರ್ಕಲ್ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.
ನಂತರ ನರೇಂದ್ರ ಕ್ರಾಸ್ ವರೆಗೆ ಸಂಚರಿಸಿ,ನರೇಂದ್ರ ಕ್ರಾಸ್ ದಲ್ಲಿ ಆದೇಶ ಉಲ್ಲಂಘಿಸಿ, 9 ಗಂಟೆ ನಂತರ ವು ಮಾವಿನ ಹಣ್ಣಿನ ಅಂಗಡಿ ತೆರೆದಿದ್ದ ಅಂಗಡಿ ಮಾಲೀಕನಿಗೆ ದಂಡ ವಿಧಿಸಿದರು.
ತಕ್ಷಣ ಬಂದ್ ಮಾಡಿಸಿದರು.ತಹಶಿಲ್ದಾರ ಅವರೊಂ ದಿಗೆ ಕಂದಾಯ ನಿರೀಕ್ಷಕರಾದ ಮಂಜುನಾಥ ಗೊಲ ಪ್ಪನವರ,ಸೇರಿದಂತೆ,ಗ್ರಾಮಲೆಕ್ಕಾಧಿಕಾರಿಗಳು ಇದ್ದರು.