ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಪ್ರಚಾರ ಜೋರಾಗಿದೆ.ಅವಳಿ ನಗರದಲ್ಲಿ ಅಧಿಕಾರದ ಚುಕ್ಕಾನೆ ಹಿಡಿಯಲು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಕಸರತ್ತು ಮಾಡುತ್ತಿದ್ದು ಇನ್ನೂ ಧಾರವಾಡದ ವಾರ್ಡ್ 2 ರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀಮತಿ ನಿಂಗವ್ವ ಹಾರಿಕೊಪ್ಪ ಭರ್ಜರಿ ಕ್ಯಾಂಪೇನ್ ಮಾಡುತ್ತಿದ್ದಾರೆ.


ಹೌದು ಬೆಳ್ಳಂ ಬೆಳಿಗ್ಗೆ ಪಕ್ಷದ ಕಾರ್ಯಕರ್ತರು ಮುಖಂಡರು ಹಾಗೇ ಮಹಿಳಾ ಮುಖಂಡರೊಂದಿಗೆ ಮನೆ ಮನೆಗೆ ತೆರಳಿ ಭರ್ಜರಿಯಾಗಿ ಮತಯಾಚನೆ ಮಾಡುತ್ತಿದ್ದಾರೆ
ವಾರ್ಡ್ ನ ಹಲವು ಬಡಾವಣೆಗಳಲ್ಲಿ ಬಿಡುವಿಲ್ಲದೇ ಮನೆ ಮನೆಗೆ ತೆರಳಿ ಕ್ಯಾಂಪೇನ್ ಮಾಡಿದರು. ಹಲವು ಬಡಾವಣೆಗಳಲ್ಲಿನ ಮನೆ ಮನೆಗೆ ತೆರಳಿ ಪ್ರಚಾರವನ್ನು ಮಾಡಿದರು.

ಈಗಾಗಲೇ ಬಿಜೆಪಿ ಪಕ್ಷದ ಶಾಸಕರು ಕ್ಷೇತ್ರದಲ್ಲಿದ್ದು ಇದರಿಂದಾಗಿ ಪಾಲಿಕೆಯಲ್ಲೂ ಬಿಜೆಪಿ ಪಕ್ಷದ ಸದಸ್ಯರು ಅಧಿಕಾರಕ್ಕೆ ಬಂದರೆ ಅಭಿವೃದ್ದಿಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ಮತ ನೀಡುವಂತೆ ವಿನಂತಿ ಮಾಡಿಕೊಂಡು ಪ್ರಚಾರ ಮಾಡಿದರು.
ಇವರೊಂದಿಗೆ ಬಿಜೆಪಿ ಪಕ್ಷದ ವಾರ್ಡ್ ನ ಹಲವು ನಾಯಕರು ಮುಖಂಡರು ಕಾರ್ಯಕರ್ತರು ಸೇರಿದಂತೆ ಹಲವರು ಸಾಥ್ ನೀಡಿ ಶ್ರೀಮತಿ ನಿಂಗವ್ವ ಶಂಕರ ಹಾರಿಕೊಪ್ಪ ಪರವಾಗಿ ಮತ ಯಾಚಿಸಿದರು.
