ಯರಗುಪ್ಪಿ –
ಕೋವಿಡ್ ೧೯ ರ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಆರೋಗ್ಯ ಲೆಕ್ಕಿಸದೇ ಕೋವಿಡ್ ಸೋಲಿಸಿ ಭಾರತ ಗೆಲ್ಲಿಸಲು ಹಗಲಿರುಳು ಶ್ರಮಿಸಿದ ಆಶಾ ಕಾರ್ಯಕ ರ್ತೆಯರಿಗೆ ಧಾರವಾಡದ ಯರಗುಪ್ಪಿ ಗ್ರಾಮದಲ್ಲಿ ನೆರವಾದರು.

ಹೌದು ಹಗಲಿರುಳು ಕೆಲಸ ಮಾಡಿದ ಇವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಡಾ. ಮಲ್ಲಿಕಾ ರ್ಜುನ ಬಾಳಿಕಾಯಿ ಅಧ್ಯಕ್ಷತೆಯಲ್ಲಿ ನಿರಾಮಯ ಫೌಂಡೇಶನ್ ಹುಬ್ಬಳ್ಳಿ ವತಿಯಿಂದ ಸ್ಟೀಮರ್, ಹಣ್ಣಿನ ರಸದ ಪ್ಯಾಕೆಟ್, ಆರೋಗ್ಯ ವರ್ಧಕ ಕಷಾಯ ಮತ್ತು ಮಾಸ್ಕ್ ಒಳಗೊಂಡ ಕಿಟ್ ಗಳನ್ನು ಯರಗುಪ್ಪಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿತರಿಸಲಾಯಿತು.



ಸಂದರ್ಭದಲ್ಲಿ ವೈದ್ಯಾಧಿಕಾರಿಗಳು,ಫೌಂಡೇಶನ್ ಸದಸ್ಯರಾದ ಬಸವರಾಜ ಸಿಎಂ,ಕಲ್ಲಪ್ಪ ಮೊರಬದ, ಗುರು ಬನ್ನಿಕೊಪ್ಪ, ಮಹೇಶ ಶ್ಯಾಮಾಳ, ಗಿರಿಧರ ಹಿರೇಮಠ ಉಪಸ್ಥಿತರಿದ್ದರು.ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಯರಗುಪ್ಪಿ,ಬರದ್ವಾಡ,ಸಂಶಿ ಯಲಿವಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿತರಣೆ ಮಾಡಲಾಯಿತು.