ಧಾರವಾಡ –
ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಧಾರವಾಡ ಕೆಎಮ್ಎಫ್ ಅಧ್ಯಕ್ಷರಾಗಿದ್ದ ಬಸವರಾಜ ಅರಬಗೊಂಡ ವಿರುದ್ದ ಕೊನೆಗೂ ಅವಿಶ್ವಾಸ ಮಂಡನೆಯಾಗಿದೆ.ಒಟ್ಟು 12 ನಿರ್ದೇಶಕ ರಲ್ಲಿ ಇಂದು ನಡೆದ ಮತಯಾತನೆಯಲ್ಲಿ ಹಾಲಿ ಅಧ್ಯಕ್ಷರಾಗಿದ್ದ ಬಸವರಾಜ ಅರಬಗೊಂಡ ಪರ ವಾಗಿ 2 ಮತಗಳು ಚಲಾವಣೆಯಾದರೆ ಇನ್ನೂ ವಿರುದ್ದವಾಗಿ 10 ಜನರು ಮತಯಾಚನೆ ಮಾಡಿದರು
ಅಂತಿಮವಾಗಿ ಅಧ್ಯಕ್ಷ ಸ್ಥಾನದಲ್ಲಿದ್ದ ಬಸವರಾಜ ಅರಬಗೊಂಡ ರನ್ನು ಕೊನೆಗೂ ಅವಿಶ್ವಾಸದ ಮೂಲಕ ಕೆಳಗಿಸಲಾಯಿತು.ಬಸವರಾಜ ಅರಬ ಗೊಂಡ ಕೈ ಪಕ್ಷದ ಮುಖಂಡರಾಗಿದ್ದು ಮಾಜಿ ಸಚಿವ ವಿನಯ ಕುಲಕರ್ಣಿ ಬೆಂಬಲಿತರಾಗಿದ್ದರು. ಇನ್ನೂ ಸಧ್ಯ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಮತ್ತು ಟೀಮ್ ನವರು ವಿನಯ ಕುಲಕರ್ಣಿ ಆಪ್ತನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿ ಸಿದ್ದು
ಅಧ್ಯಕ್ಷರಾಗಿ ಶಾಸಕ ಅಮೃತ ದೇಸಾಯಿ ಆಪ್ತ ಶಂಕರ ಮುಗದ ಆಯ್ಕೆ ಬಹುತೇಕ ಖಚಿತವಾಗಿದ್ದು ಹದಿನೈದು ದಿನಗಳ ನಂತರ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ಒಟ್ಟಾರೆ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಬಸವರಾಜ ಅರಬಗೊಂಡ ರನ್ನು ಅಧ್ಯಕ್ಷ ಕುರ್ಚಿ ಯಿಂದ ಅವಿಶ್ವಾಸ ಮಾಡಿ ಕೆಳಗಿಳಿಸಿ ಆ ಒಂದು ಸ್ಥಾನವನ್ನು ಶಾಸಕ ಅಮೃತ ದೇಸಾಯಿ ತಮ್ಮ ವಶಕ್ಕೆ ತಗೆದುಕೊಂಡಿದ್ದಾರೆ.