ಧಾರವಾಡ –
ಹರ್ ಘರ್ ತಿರಂಗ ಆ.13 ರಿಂದ 15 ರವರೆಗೆ ಸರ್ಕಾರಿ ಕಚೇರಿಗಳಲ್ಲಿ ಪ್ರತಿದಿನ ಧ್ವಜಾರೋಹಣಕ್ಕೆ ಸೂಚನೆ
ಮನೆಗಳಲ್ಲಿ ಮಾತ್ರ ಹಗಲು ರಾತ್ರಿ ಧ್ವಜ ಹಾರಿಸಲು ಅವಕಾಶ
ಹೌದು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಕಚೇರಿ,ಶಾಲೆ,ಕಾಲೇಜು,ಅಂಗನವಾಡಿ ಸೇರಿದಂತೆ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಆಗಸ್ಟ್ 13 ರಿಂದ 15 ರವರೆಗೆ ಪ್ರತಿದಿನ ಬೆಳಿಗ್ಗೆ 8 ಕ್ಕೆ ಧ್ವಜಾರೋಹಣ ಮಾಡಿ ಸೂರ್ಯಸ್ತದ ವೇಳೆಗೆ ಇಳಿಸಬೇಕು.ಜಿಲ್ಲೆಯಾದ್ಯಂತ ಖಾಸಗಿ ಮನೆಗಳಲ್ಲಿ ಮಾತ್ರ ಆಗಸ್ಟ್ 13 ರಂದು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಿ ಹಗಲು ರಾತ್ರಿ ನಿರಂತರ ವಾಗಿ ಧ್ವಜ ಹಾರಿಸಿ ಆಗಸ್ಟ್ 15 ರ ಸಂಜೆ ಸೂರ್ಯಾಸ್ತ ವೇಳೆಗೆ ಇಳಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.ಈ ಮೊದಲು ನೀಡಿದ ಸೂಚನೆಯಲ್ಲಿ ಆಗಸ್ಟ್ 13 ರಿಂದ 15 ರವರೆಗೆ ನಿರಂತರವಾಗಿ ಧ್ವಜ ಹಾರಿಸಲು ತಿಳಿಸಲಾಗಿತ್ತು.ಇಂದು ಆಗಸ್ಟ್ 8 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ವಿಡಿಯೋ ಸಂವಾದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶದನ್ವಯ ಈ ಆದೇಶದಲ್ಲಿ ಪರಿಷ್ಕರಣೆ ಮಾಡಲಾ ಗಿದೆ.ಜಿಲ್ಲೆಯಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.