ಧಾರವಾಡ –
ಕರೊನಾ ವಿಚಾರ ಕುರಿತಂತೆ ಸರಿಯಾದ ಕ್ರಮವನ್ನು ಕೈಗೊಳ್ಳದ ಮತ್ತು ಬೇಜವಾಬ್ದಾರಿಯ ಕೆಲಸದಿಂದಾ ಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಗೆ ಧಾರವಾಡ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ನೊಟೀಸ್ ಜಾರಿ ಮಾಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಕರೊನಾ ಹೆಚ್ಚಳ ಹಿನ್ನೆಲೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಗೆ ಜಿಲ್ಲಾಧಿಕಾರಿ ನೊಟೀಸ್ ಜಾರಿ ಮಾಡಿದ್ದಾರೆ.

ಕಾರಣ ಕೇಳಿ ನೋಟೀಸ್ ನ್ನು ಧಾರವಾಡ ಜಿಲ್ಲಾಧಿಕಾರಿ ಜಾರಿ ಮಾಡಿದ್ದಾರೆ.ಮಹಾನಗರ ಪಾಲಿಕೆಯವರು ಕಳೆದ ಒಂದು ವಾರದಿಂದ ಯಾರಿಗೂ ಮಾಸ್ಕ ದಂಡವನ್ನು ಹಾಕಿಲ್ಲ ಅದಕ್ಕಾಗಿ ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ಅಂತಾ ನೋಟೀಸ್ ನಲ್ಲಿ ಉಲ್ಲೇಖವನ್ನು ಮಾಡಿ ನೊಟೀಸ್ ಕೊಟ್ಟಿದ್ದೇವೆ ಎಂದಿದ್ದಾರೆ.
ಪ್ರತಿ ದಿನ ಮಾಸ್ಕ ಹಾಕದವರಿಗೆ ದಂಡ ಹಾಕಲು ಸೂಚಿಸಿತ್ತು ಆದರೂ ದಂಡ ಹಾಕಿಲ್ಲ ಈ ಬೇಜವಾಬ್ದಾರಿತನಕ್ಕೆ ಯಾಕೆ ಕ್ರಮ ಕೈಗೊಳ್ಳಬಾರ ದೆಂದು ನೋಟೀಸ್ ನ್ನು ಜಿಲ್ಲೆಯ ಎಲ್ಲ ಪಿಡಿಒ ಪಟ್ಟಣ ಪಂಚಾಯ್ತಿ ಮತ್ತು ಪುರಸಭೆ ಮುಖ್ಯಾಧಿಕಾ ರಿಗಳಿಗೂ ನೋಟೀಸ್ ನ್ನು ಜಾರಿ ಮಾಡಿದ್ದು ಮಾಸ್ಕ್ ರಹಿತರಿಗೆ ದಂಡ ಹಾಕುವಂತೆ ನೋಟೀಸ್ ನ್ನು ನೀಡಿದ್ದಾರೆ.