ಹುಬ್ಬಳ್ಳಿ –
ನಿನ್ನೇಯಷ್ಚೇ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆ ಇನಸ್ಪೇಕ್ಟರ್ ಆಗಿ OOD ಮೇಲೆ ಅಧಿಕಾರ ವಹಿಸಿಕೊಂಡಿದ್ದ ಎನ್ ಪಿ ಕಾಡದೇವರಮಠ ಅವರ OOD ಆದೇಶ ರದ್ದಾಗಿದೆ. ಪೂರ್ಣ ಪ್ರಮಾಣದ ಹೊಸ ಆದೇಶವಾಗಿದೆ.
ಇಂದು ಬಂದ ಮತ್ತೊಂದು ಆದೇಶದಲ್ಲಿ ಅವರ OOD ಆದೇಶವನ್ನು ಸರ್ಕಾರ ರದ್ದು ಮಾಡಿ ಹೊಸ ಆದೇಶವನ್ನು ಹೊರಡಿಸಿದೆ. ನಿನ್ನೇ ಇನಸ್ಪೇಕ್ಟರ್ ಎನ್ ಪಿ ಕಾಡದೇವರಮಠ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಇನಸ್ಪೇಕ್ಟರ್ ಆಗಿ ವರ್ಗಾವಣೆಯಾಗಿದ್ದರು.2007 ರ ಬ್ಯಾಚ್ ನ ಎನ್ ಪಿ ಕಾಡದೇವರಮಠ ಠಾಣೆಯಲ್ಲಿ ಅಧಿಕಾರವನ್ನು ಸ್ವೀಕಾರ ಮಾಡಿದ್ದರು.
ಈ ಹಿಂದೆ ಠಾಣೆಯಲ್ಲಿ ಕರ್ತವ್ಯದ ಮೇಲಿದ್ದ ಪ್ರಶಾಂತ ನಾಯಕ ವರ್ಗಾವಣೆಯಾದ ನಂತರ ಎರಡೂವರೆ ತಿಂಗಳ ಕಾಲ ಅನಾಥವಾಗಿದ್ದ ಪೂರ್ವ ಸಂಚಾರಿ ಠಾಣೆಯ ಜವಾಬ್ದಾರಿಯನ್ನು ಶರಣ ದೇಸಾಯಿ ನಿಭಾಯಿಸಿದ್ದರು.ತಾತ್ಕಾಲಿಕವಾಗಿ ವರ್ಗಾವಣೆಗೊಂಡ ಇನಸ್ಪೇಕ್ಟರ್ ಎನ್ ಪಿ ಕಾಡದೇವರಮಠ ಅವರಿಗೆ ಇಂದು ಪಿಎಸೈ ಶರಣ ದೇಸಾಯಿ ಕಚೇರಿಗೆ ಬರಮಾಡಿಕೊಂಡು ಸ್ವಾಗತಿಸಿದ್ದರು.
ಹಾಗೇ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಸಮಸ್ತ ಸಿಬ್ಬಂದ್ದಿಗಳು ಕೂಡಾ ನೂತನ ಚಾರ್ಲಿ ಸಾಹೇಬರನ್ನು ಕಚೇರಿಗೆ ಸ್ವಾಗತಿಸಿಕೊಂಡರು.ಇಂದು ಮತ್ತೊಂದು ಆದೇಶ ಬಂದಿದ್ದು ಇಂದಿನಿಂದ ಪೂರ್ವ ಸಂಚಾರಿ ಪೊಲೀಸ್ ಠಾಣೆಗೆ ಪೂರ್ಣ ಪ್ರಮಾಣದಲ್ಲಿ ಇನಸ್ಪೇಕ್ಟರ್ ಆಗಿದ್ದಾರೆ.