ಹುಬ್ಬಳ್ಳಿ –
7ನೇ ವೇತನ ಆಯೋಗ ಮತ್ತು ಹಳೆಯ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಮಾರ್ಚ್ 1 ರಿಂದ ರಾಜ್ಯದಲ್ಲಿ ರಾಜ್ಯ ಸರ್ಕಾರಿ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ ಈ ಎರಡು ಬೇಡಿಕೆ ಗಳ ಕುರಿತು ರಾಜ್ಯ ಸರ್ಕಾರಕ್ಕೆ ರಾಜ್ಯದ ಸರ್ಕಾರಿ ನೌಕರರು 7 ದಿನಗಳ ಡೆಡ್ ಲೈನ್ ನೀಡಿದ್ದರು.ಈ ಒಂದು ಅವಧಿ ಇನ್ನೇರೆಡು ದಿನಗಳಲ್ಲಿ ಮುಗಿ ಯಲಿದ್ದು ಹೀಗಾಗಿ ಹೋರಾಟದ ಕಾವು ಕಿಚ್ಚು ರಾಜ್ಯದಲ್ಲಿ ಜೋರಾಗುತ್ತಿದೆ.
ಈ ನಡುವೆ ಈ ಒಂದು ವಿಚಾರ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ ಯಲ್ಲಿ ಮಾತನಾಡಿ ನಾನು ರಾಜ್ಯದ ಸರ್ಕಾರಿ ನೌಕರರ ಸಮಸ್ಯೆ ನನ್ನ ಗಮನದಲ್ಲಿದ್ದು ನಿರಂತರವಾಗಿ ಅವರ ಜೊತೆಯಲ್ಲಿ ಸಂಪರ್ಕ ದಲ್ಲಿ ಇದ್ದೇನೆ ಎಂದರು
ಒಂದೇ ಒಂದು ಮಾತಿನಲ್ಲಿ ಹೀಗೆ ಹೇಳುತ್ತಾ ಮುಖ್ಯಮಂತ್ರಿ ಅವರು ಜಾರಿಕೊಂಡರು.ಭರವಸೆ ಇಲ್ಲವೇ ಅವರ ಜೊತೆಯಲ್ಲಿ ನಾನು ಮಾತನಾಡುತ್ತೇನೆ ಅಂತಾ ಹೇಳುವ ಬದಲಿಗೆ ಹೀಗೆ ಮುಖ್ಯಮಂತ್ರಿ ಹೇಳಿದ್ದು ನಿಜಕ್ಕೂ ಕೂಡಾ ರಾಜ್ಯದ ಸರ್ಕಾರಿ ನೌಕರರ ಪರವಾಗಿ ಇರುವ ಕಾಳಜಿಯನ್ನು ಈ ಒಂದು ಮಾತುಗಳು ತೋರಿಸುತ್ತವೆ.
ಇತ್ತ ಆದೇಶ ಪ್ರತಿ ಸಿಕ್ಕರೆ ನಾವು ಹೋರಾಟವನ್ನು ಹಿಂದೆ ತಗೆದುಕೊಳ್ಳುತ್ತೇವೆ ಎಂದು ಹೇಳುತ್ತಾ ಹೋರಾಟಕ್ಕೆ ರಾಜ್ಯದ ಸರ್ಕಾರಿ ನೌಕರರು ಸಿದ್ದರಾಗುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..