ಚಾಮರಾಜನಗರ –
ಗ್ರಾಮ ಪಂಚಾಯತಿ ಅಧ್ಯಕ್ಷ ಆಕಾಂಕ್ಷಿಗಳಿಂದ ಆಣೆ ಪ್ರಮಾಣ ಇದೀಗ ಹೆಚ್ಚಾಗುತ್ತಿದೆ.ಇದಕ್ಕೆ ಸಾಕ್ಷಿಯಾಗಿ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಆಣೆ ಪ್ರಮಾಣದ ವೀಡಿಯೋ ಸಖತ್ ವೈರಲ್ ಆಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಣ್ಣೂರು ಗ್ರಾಮ ಪಂಚಾಯತಿ ಸದಸ್ಯರುಗಳು ಗ್ರಾಮದ ಮುಖಂಡರ ನೇತೃತ್ವದಲ್ಲಿ ಧರ್ಮಸ್ಥಳ ಕ್ಕೆ ಪ್ರವಾಸ ಮಾಡಿ ಅಲ್ಲಿ ಕರ್ಪೂರ ಹಚ್ಚಿ ಆಣೆ ಪ್ರಮಾಣ ಮಾಡಿಸಿದ ಘಟನೆ ನಡೆದಿದೆ.

ಕಣ್ಣೂರು ಗ್ರಾಮ ಪಂಚಾಯ್ತಿಯ ಸದಸ್ಯರುಗಳು ಮುಖಂಡ ಬಸವರಾಜಪ್ಪರವರ ಸಮ್ಮುಖದಲ್ಲಿ ಕರ್ಪೂರ ಹಚ್ಚಿ ಧರ್ಮಸ್ಥಳ ಮಂಜುನಾಥ ಸಾಕ್ಷಿಯಾಗಿ ಅಧಿಕಾರ ಹಂಚಿಕೊಳ್ಳು ಆಣೆ ಪ್ರಮಾಣ ಮಾಡಿದ್ದಾರೆ. ಈ ವೇಳೆ ಮೊಬೈಲ್ ನಲ್ಲಿ ಚಿತ್ರೀಕರಣ ಸಹ ಮಾಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಧರ್ಮಸ್ಥಳ ಮಂಜುನಾಥ ಸಾಕ್ಷಿಯಾಗಿ ಮಾಡಿರುವ ಆಣೆ ಪ್ರಮಾಣವನ್ನು ಅಧಿಕಾರ ನಡೆಸುವ ಗ್ರಾಮ ಪಂಚಾಯತಿ ಸದಸ್ಯರು ಪಾಲಿಸುವರೇ ಎಂಬುದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯಂದು ತಿಳಿಯಲಿದೆ