ಧಾರವಾಡ –
ಧಾರವಾಡ ಜಿಲ್ಲೆಯಲ್ಲಿ ಒರ್ವ ಶಿಕ್ಷಕಿ ಮತ್ತು ಒರ್ವ ವಿದ್ಯಾರ್ಥಿ ಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ ಹೌದು ಹುಬ್ಬಳ್ಳಿ ಶಾಲೆಯೊಂದರಲ್ಲಿ ಈ ಒಂದು ವೈರಸ್ ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಹೇಳಿ ದರು ಧಾರವಾಡ ದಲ್ಲಿ ಮಾತನಾಡಿದ ಅವರು ಧಾರವಾಡ ಜಿಲ್ಲೆಯಲ್ಲಿ ಈಗ ಮತ್ತೆ ಎರಡು ಓಮಿಕ್ರಾನ್ ಪತ್ತೆಯಾಗಿವೆ ಎಂದರು
53 ವರ್ಷದ ಮಹಿಳೆ ಮತ್ತು 14 ವರ್ಷದ ಬಾಲಕಿಯಲ್ಲಿ ಇದು ಪತ್ತೆಯಾಗಿದ್ದು ಇಬ್ಬರು ಹುಬ್ಬಳ್ಳಿಯವರಾಗಿದ್ದು ಶಿಕ್ಷಕಿ ಮತ್ತು ವಿದ್ಯಾರ್ಥಿನಿ ಇಬ್ಬರು ಆಗಿದ್ದಾರೆ ಓಮಿಕ್ರಾನ್ ಸೋಂಕಿತರು.ಒಬ್ಬರಿಗೆ ಡಿಸೆಂಬರ್ 19, ಇನ್ನೊಬ್ಬರಿಗೆ ಡಿಸೆಂಬರ್ 17 ರಂದು ಕೊರೊನಾ ದೃಢಪಟ್ಟಿತ್ತು.ಇನ್ನೂ ಸಧ್ಯ ಇಬ್ಬರು ಈಗ ಗುಣಮುಖಾಗಿದ್ದಾರೆ.ಜಿನೊಮಿಕ್ ಸಿಕ್ವೆನ್ಸಿಂಗ್ ವರದಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ ಎಂದರು.
ಸಧ್ಯ ಅವರು ಮನೆಯಲ್ಲಿಯೇ ಇದ್ದಾರೆ.ಅವರ ಸಂಪರ್ಕಕ್ಕೆ ಬಂದ 395 ಜನರ ವರದಿ ನೆಗೆಟಿವ್ ಬಂದಿದೆ.ಆದರೂ ಇನ್ನೊಮ್ಮೆ ಅವರನ್ನು ಟೆಸ್ಟ್ ಮಾಡುತ್ತೇವೆ.ಈಗಾಗಲೇ ಇವರ ಶಾಲೆಗೂ ರಜೆ ನೀಡಲಾಗಿದೆ.ಇಬ್ಬರ ಎರಡೂ ವರದಿ ನೆಗೆಟಿವ್ ಬರಬೇಕು ಅಲ್ಲಿಯವರೆಗೆ ಶಾಲೆಗೆ ರಜೆ ನೀಡಲಾ ಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.