ಧಾರವಾಡ –
ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧಾರವಾಡದಲ್ಲಿ ಕರ್ನಾಟಕ ಆದಿಜಾಂಭವ ಸಂಘಟನೆ ವತಿಯಿಂದ ಪ್ರತಿಭಟನಾ ರಾಲಿ ನಡೆಯಿತು. ನಗರದ ಕಡಪಾ ಮೈದಾನದಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ರಾಲಿ ಮಾಡಿದರು.

ಪ್ರಮುಖವಾಗಿ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಜಾರಿಗೆ ತರುವ ಕುರಿತಂತೆ ಕೇಂದ್ರಕ್ಕೇ ಶಿಫಾರಸ್ಸು ಮಾಡಬೇಕು,ಹಾಗೂ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುಂತೆ ಆಗ್ರಹಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು. ಕಳೆದ 3 ವರುಷಗಳಿಂದ ಒಳ ಮೀಸಲಾತಿ ಜಾರಿಗೊಳಿಸಲು ಒತ್ತಾಯಿಸಿ ರಚನೆ ಮಾಡಿದ ಈ ಒಂದು ವರದಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತರಲು ಹಿಂದೇಟು ಹಾಕುತ್ತಿದೆ.

ಕೂಡಲೇ ಇದನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿ ಕೇಂದ್ರಕ್ಕೇ ಸಲ್ಲಿಸಬೇಕೆಂದು ಹೋರಾಟಗಾರರು ಒತ್ತಾಯಿಸಿದ್ರು. ಇದರೊಂದಿಗೆ ಇನ್ನೂ ಸಮಾಜದ ಪ್ರಮುಖ ಐದು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಕಲಾ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ರಾಲಿ ಮಾಡಿದ ಆದಿಜಾಂಭವ ಸಮಾಜದವರು ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಬಿಜೆಪಿ ಸರ್ಕಾರ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದ್ರು.

ಇನ್ನೂ ಈ ಒಂದು ಹೋರಾಟದಲ್ಲಿ ಸಮಾಜದ ಮುಖಂಡರಾದ ವಿಜಯ ಗುಂಟ್ರಾಳ್, ಬಸವರಾಜ ಮಾದರ, ಮೋಹನ ಹಿರೇಮನಿ, ದುರಗಪ್ಪ ಪೂಜಾರ, ಮದುಕೇಶ್ವರ ಮಾದರ , ರಾಮಚಂದ್ರ ,ಚಂದ್ರಶೇಖರ ಉಗ್ನಿಕೇರಿ , ಸುರೇಶ ದೊಡ್ಡಮನಿ , ನಾಗರಾಜ ಸನ್ಮನಿ , ರಾಕೇಶ ದೊಡ್ಡಮನಿ , ಚಿದಾನಂದ ದೊಡ್ಡಮನಿ ,ಮಂಜುನಾಥ ಹಾದಿಮನಿ ಸೇರಿದಂತೆ ಧಾರವಾಡ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸಮಾಜದ ಮುಖಂಡರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.