ಕರ್ತವ್ಯ ನಿರತ‌ ಗ್ರಾ.ಪಂ.ಸಹಾಯಕ‌ ಚುನಾವಣಾ ಅಧಿಕಾರಿ ನಿಧನ

Suddi Sante Desk

ಹುಬ್ಬಳ್ಳಿ – ಹುಬ್ಬಳ್ಳಿ ತಾಲೂಕು ನೂಲ್ವಿ ಗ್ರಾಮ ಪಂಚಾಯಿತಿ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್.ಹೆಚ್.ರಾಠೋಡ್ ನಿಧನರಾಗಿದ್ದಾರೆ.

ಆನಂದನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್.ಹೆಚ್.ರಾಠೋಡ್ ಅವರನ್ನು ನೂಲ್ವಿ ಗ್ರಾ.ಪಂ. ಸಹಾಯಕ ಚುನಾವಣೆ ಅಧಕಾರಿಯಾಗಿ ನೇಮಿಸಲಾಗಿತ್ತು.

ಇಂದು ಬೆಳಿಗ್ಗೆ‌ 10 ಗಂಟೆಗೆ ಚುನಾವಣೆ ಕರ್ತವ್ಯಕ್ಕೆ ತೆರಳುವ ವೇಳೆ ಉಣಕಲ್ ಬಸ್ ನಿಲ್ದಾಣಕ್ಕೆ ಮೂರ್ಛೆ ಹೋಗಿ ಕುಸಿದು ಬಿದ್ದಿದ್ದರು. ನಂತರ ಕಿಮ್ಸ್ ಆಸ್ಪತ್ರೆ ಸಾಗಿಸುವ ದಾರಿ ಮಧ್ಯದಲ್ಲಿಯೇ ಅಸುನೀಗಿದ್ದಾರೆ. ನೂಲ್ವಿ ಗ್ರಾ.ಪಂ.ಚುನಾವಣೆ ಅಧಿಕಾರಿ ಉಪನ್ಯಾಸಕ ಅಶೋಕ ಎಸ್.‌ಗಡಾದ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ತಹಶೀಲದಾರರಿಗೆ ಮಾಹಿತಿ ನೀಡಿದ್ದಾರೆ.

ಗ್ರಾಮೀಣ ತಹಶೀಲದಾರ ಪ್ರಕಾಶ್ ನಾಶಿ ಹಾಗೂ ನಗರ ತಹಶೀಲದಾರ ಶಶಿಧರ ಮಾಡ್ಯಳ ಅವರು ಕಿಮ್ಸ್ ಆಸ್ಪತ್ರೆಗೆ ತೆರಳಿ‌ ಮೃತರ ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು. ಚುನಾವಣೆ ತುರ್ತು ಕಾರ್ಯದ ನಿಮಿತ್ತ ದೈಹಿಕ ಶಿಕ್ಷಕ ರಾಜೇಸಾಬ ನದಾಫ ಅವರನ್ನು ಸಹಾಯಕ ಚುನಾವಣಾ ಅಧಿಕಾರಿಯಾಗಿ ನೇಮಿಸಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.