ವರ ಮಹಾಲಕ್ಷ್ಮೀ ಹಬ್ಬದ ದಿನದಂದು ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಆಯೋಗ ರಚನೆ ವಿಚಾರದಲ್ಲಿ ಷಡಾಕ್ಷರಿ ಅವರಿಂದ ಸಿಹಿ ಸುದ್ದಿ – ಜನೆವರಿ ಒಳಗಾಗಿ ರಾಜ್ಯದ ಸರ್ಕಾರಿ ನೌಕರರಿಗೆ ಅಧಿಕೃತವಾಗಿ ಸಿಗಲಿದೆ ಆದೇಶ ಎಂದ ರಾಜ್ಯಾಧ್ಯಕ್ಷರು…..

Suddi Sante Desk

ಹೊಸದುರ್ಗ –

ರಾಜ್ಯದ ಸರ್ಕಾರಿ ನೌಕರರಿಗೆ ಜನೆವರಿ ಒಳಗಾಗಿ ಮುಖ್ಯ ಮಂತ್ರಿ ಹೇಳಿದಂತೆ ಹೊಸ ವೇತನ ಆಯೋಗ ರಚನೆ ಯಾಗಿ ವರದಿ ಬಂದ ಕೂಡಲೇ ಸರ್ಕಾರಿ ಆದೇಶ ಸಿಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಮತ್ತೆ ಭರವಸೆಯ ಮಾತುಗಳನ್ನು ಹೇಳಿದರು.ಇದರೊಂದಿಗೆ ರಾಜ್ಯದ ಸರ್ಕಾರಿ ನೌಕರರಿಗೆ
ವರ ಮಹಾಲಕ್ಷ್ಮೀ ದಿನದಂದು ಸಿಹಿ ಸುದ್ದಿಯ ಮಾತುಗ ಳನ್ನು ಹೇಳಿದರು.ಹೊಸದುರ್ಗ ದಲ್ಲಿ ಮಾತನಾಡಿದ ಅವರು ಮುಂದಿನ ಜನವರಿ ಅಂತ್ಯದೊಳಗೆ ಹೊಸ ವೇತನ ಆಯೋಗ ರಚಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಆಯೋಗದ ವೇತನ ಶ್ರೇಣಿ ಕೊಡಿಸಲಾಗುವುದು.

ಇದರೊಂದಿಗೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡು ವಂತಹ ಯೋಜನೆ ಶೀಘ್ರ ಜಾರಿಯಾಗಲಿದೆ ಎಂದರು. ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾ ರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೇತನ ಆಯೋಗ ರಚನೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಾವು ಉತ್ತಮವಾಗಿ ಕೆಲಸ ಮಾಡುವುದರ ಮೂಲಕ ಸರ್ಕಾರಕ್ಕೆ ಬೆಂಬಲ ನೀಡಿ ಹೆಸರು ತರಬೇಕಿದೆ.ನೌಕರರ ಸಂಘಕ್ಕೆ ಬರುವ ಆದಾಯ ಸಂಘದ ಸದಸ್ಯರಿಗೆ ಬಳಕೆ ಯಾಗಬೇಕಿದೆ.

ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.ಇನ್ನೂ ಮಹಿಳಾ ನೌಕರರ ಸಮಸ್ಯೆಗಳಿಗೆ ಸ್ಪಂದಿಸಬೇಕುತಾಲ್ಲೂಕು ಮಟ್ಟದಲ್ಲಿ ಪ್ರತಿ ತಿಂಗಳು ನೌಕರರ ಕುಂದುಕೊರತೆ ಆಲಿಸಲು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರಿಗಾಗಿ ₹ 17 ಕೋಟಿ ವೆಚ್ಚದಲ್ಲಿ ಶತಮಾನೋತ್ಸವ ಭವನವನ್ನು ನಿರ್ಮಾಣ ಮಾಡಲಾಗಿದೆ.ನೌಕರರ ಕುಂದುಕೊರತೆಗೆ ಸ್ಪಂದಿಸಲಾಗುವುದು. ಸಂಘಟನೆ ಬಲಪಡಿಸಿ ಮಾದರಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಲಕ್ಷ್ಮಯ್ಯ ಹೇಳಿದರು.ಅಧ್ಯಕ್ಷರಾಗಿ ಆರ್.ಲಕ್ಷ್ಮಯ್ಯ, ರಾಜ್ಯ ಪರಿಷತ್ ಸದಸ್ಯರಾಗಿ ಶಶಿಧರ್,ಪ್ರಧಾನ ಕಾರ್ಯ ದರ್ಶಿಯಾಗಿ ವೀರೇಂದ್ರ ಪಾಟೀಲ್ ಮತ್ತು ಖಜಾಂಚಿ ಯಾಗಿ ದಿಲೀಪ್ ಕುಮಾರ್ ಅಧಿಕಾರ ವಹಿಸಿಕೊಂ ಡರು ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಮೋಹನ್ ಕುಮಾರ್,ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಚಳ್ಳಕೆರೆ ತಾಲ್ಲೂಕು ಘಟಕದ ಅಧ್ಯಕ್ಷ ಜಗನ್ನಾಥ, ಮೊಳ ಕಾಲ್ಮುರು ಘಟಕದ ಈರಣ್ಣ,ಹಿರಿಯೂರು ಘಟಕದ ಶಿವಕುಮಾರ್,ಹೊಳಲ್ಕೆರೆ ಘಟಕದ ಲೋಕೇಶ್, ಮಧು ಗಿರಿ ಘಟಕದ ವೆಂಕಟೇಶ್ ಸೇರಿದಂತೆ ಹಲವರು ಈ ಒಂದು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.