ಧಾರವಾಡ –
ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒರ್ವ ಸ್ಥಳದಲ್ಲೇ ಸಾವಿಗೀಡಾಗಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಹೌದು ಧಾರವಾಡದ ಹಳಿಯಾಳ ನಾಕಾದ ಬಳಿಯ ಆಕಾಶವಾಣಿ ಮುಂದೆ ನಡೆದಿದೆ.










ವೇಗವಾಗಿ ಬಂದ ಎರಡು ಬೈಕ್ ಗಳು ಪರಸ್ಪರ ಮುಖಾಮುಖಿ ಯಾಗಿ ಡಿಕ್ಕಿಯಾಗಿವೆ.ಇನ್ನೂ ಸ್ಥಳದಲ್ಲೇ ಯಾಸೀನ್ ಗೋಪನಕೊಪ್ಪ ಸಾವಿಗೀ ಡಾಗಿದ್ದು ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಗಳೊಂದಿಗೆ ಸಾರ್ವಜನಿಕರು ಕೂಡಾ ಸ್ಥಳದಲ್ಲೇ ಸಹಾಯ ಮಾಡಿದ್ದು ಕಂಡು ಬಂದಿತು.