ಧಾರವಾಡ –
ರಸ್ತೆ ಪಕ್ಕದಲ್ಲಿರುವ ಕಂಬಕ್ಕೆ ಬೈಕ್ ವೊಂದು ಗುದ್ದಿ ಸ್ಥಳದಲ್ಲಿಯೇ ಬೈಕ್ ಸವಾರ ನೊಬ್ಬನು ಸಾವಿಗೀಡಾದ ಘಟನೆ ಧಾರವಾಡ ದಲ್ಲಿ ನಡೆದಿದೆ

ನಗರದ ಮಾರ್ಡನ್ ಹಾಲ್ ಮುಂದೆ ಈ ಒಂದು ಘಟನೆ ನಡೆದಿದೆ.ಮಹೇಶ್ ಭಜಂತ್ರಿ ಮೃತರಾದ ಬೈಕ್ ಸವಾರನಾಗಿದ್ದಾನೆ.ಮೂಲತಃ ವಿಜಯಪುರದ ನವನಾಗಿದ್ದ ಇವನು ಐಎಎಸ್ ತರಬೇತಿ ಗೆ ಧಾರವಾಡ ಗೆ ಬಂದಿದ್ದರು

ನಗರದ ಧಾನೇಶ್ವರಿ ನಗರದಲ್ಲಿ ರೂಮ್ ಮಾಡಿ ಕೊಂಡು ತರಭೇತಿ ತೆಗೆದುಕೊಳ್ಳುತ್ತಿದ್ದ ರಾತ್ರಿ ರೂಮ್ ಗೆ ಹೊರಟಿದ್ದ ಸಮಯದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಪುಟ್ ಪಾತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ

ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಮಹೇಶ್ ಸಾವಿಗೀಡಾಗಿದ್ದು ಇನ್ನೂ ವಿಷಯ ತಿಳಿದ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಈ ಕುರಿತು ದೂರನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ
