ಹುಬ್ಬಳ್ಳಿ –
ಪಾಲಿಕೆಯ ಲೆಕ್ಕಪತ್ರ ವಿಭಾಗಕ್ಕೆ ಆಪರೇಶನ್ – ಒಂದೇ ವಾರದಲ್ಲಿ ಹೊಸ ಆಯುಕ್ತರ ಮುಂದೆ ಸಾಲು ಸಾಲು ದೂರು ನೀಡಿದ ಗುತ್ತಿಗೆದಾರರು,ಪಾಲಿಕೆಯ ಸದಸ್ಯರು…..
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಹೊಸ ಆಯುಕ್ತರಾಗಿ ಡಾ ರುದ್ರೇಶ ಘಾಳಿ ಯವರು ಅಧಿಕಾರವನ್ನು ವಹಿಸಿಕೊಂಡಿದ್ದಾರೆ.ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಪಾಲಿಕೆಯ ಲೆಕ್ಕಪತ್ರ ವಿಭಾಗ ದಲ್ಲಿನ ವ್ಯವಸ್ಥೆ ಕುರಿತಂತೆ ಗುತ್ತಿಗೆದಾರರು ಪಾಲಿಕೆಯ ಕೆಲ ಅಧಿಕಾರಿಗಳು,ಸದಸ್ಯರು ಹೊಸ ಆಯುಕ್ತರ ಮುಂದೆ ಲೆಕ್ಕಪತ್ರ ವಿಭಾಗದಲ್ಲಿನ ವ್ಯವಸ್ಥೆ ಕುರಿತಂತೆ ದೂರನ್ನು ನೀಡಿದ್ದಾರೆ.
ಆಯುಕ್ತರಾಗಿ ಅಧಿಕಾರವನ್ನು ವಹಿಸಿಕೊಂಡ ಒಂದೇ ವಾರದಲ್ಲಿ ಹಲವು ದೂರುಗಳು ಆಯುಕ್ತರ ಮುಂದೆ ಬಂದಿದ್ದು ಈ ಎಲ್ಲಾ ದೂರುಗಳನ್ನು ಆಯುಕ್ತರು ಪರಿಶೀಲನೆ ಮಾಡಿದ್ದು ಇದನ್ನು ಗಂಭೀರವಾಗಿ ತಗೆದು ಕೊಂಡು ಆಪರೇಶನ್ ಮಾಡಲು ನಿರ್ಧಾರವನ್ನು ಕೈಗೊಂಡಿದ್ದಾರೆ.ವಿಳಂಬವಾಗುತ್ತಿರುವ ಬಿಲ್ ಗಳು, ವಿಳಂಬವಾಗುತ್ತಿರುವ ವೇತನ,ಯಾವುದೇ ಪೈಲ್ ಗಳನ್ನು ಕಳುಹಿಸಿದರೆ ವಿನಾಕಾರಣ ವಿಳಂಬ ಮಾಡುತ್ತಿದ್ದು ಇದರೊಂದಿಗೆ ಒಂದು ಎರಡು ಮೂರು ನಾಲ್ಕು ಹೀಗೆ ಆರೇಳು ತಿಂಗಳುಗಳೇ ಕಾಯುತ್ತಿರು ವುದು
ಇದರೊಂದಿಗೆ ಇನ್ನೊಂದು ಪ್ರಮುಖ ಸಮಸ್ಯೆಯನ್ನು ಕೂಡಾ ಆಯುಕ್ತರ ಮುಂದೆ ಗುತ್ತಿಗೆದಾರರು,ಪಾಲಿಕೆಯ ಸದಸ್ಯರು ದಾಖಲೆಗಳೊಂದಿಗೆ ಆಯುಕ್ತರ ಮುಂದೆ ಮಾಹಿತಿಯನ್ನು ನೀಡಿದ್ದು ಇದನ್ನು ಹೊಸ ಆಯುಕ್ತರು ಕೂಡಾ ಗಂಭೀರವಾಗಿ ತಗೆದುಕೊಂಡಿದ್ದು ಶೀಘ್ರದಲ್ಲೇ ಲೆಕ್ಕ ತಪ್ಪಿರುವ ಲೆಕ್ಕಪತ್ರ ವಿಭಾಗಕ್ಕೆ ಆಪರೇಶನ್ ಮಾಡಿ ಸರ್ಜರಿ ಮಾಡುವ ಭರವಸೆಯನ್ನು ಗುತ್ತಿಗೆದಾರರಿಗೆ ಪಾಲಿಕೆಯ ಸದಸ್ಯರಿಗೆ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..