ಬೆಂಗಳೂರು –
ಕೋವಿಡ್ ನಿಂದಾಗಿ ರಾಜ್ಯದಲ್ಲಿ ಮೃತರಾದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ,ಶಿಕ್ಷಕರಿಗೆ,ನೌಕರರಿಗೆ ಕೂಡಲೇ ಪರಿಹಾರ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಅನ್ವಕುಮಾರ್ ಸೂಚಿಸಿದ್ದಾರೆ.

ಮೃತರಾದವರಿಗೆ ಪರಿಹಾರ ನೀಡ ಬೇಕಾಗಿರುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ ಹೀಗಾಗಿ ಕರ್ತವ್ಯ ನಿರತರಾದ ಸಮಯದಲ್ಲಿ ಮೃತ ರಾಗಿದ್ದರೆ ಕೂಡಲೇ ಅವರಿಗೆ ಪರಿಶೀಲನೆ ನಡೆಸಿ ಪರಿಹಾರ ನೀಡುವಂತೆ ಸೂಚಿಸಿದ್ದಾರೆ. ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿ ಕಾರಿಗಳಿಗೆ ಸೂಚನೆ ನೀಡಿ ಆದೇಶವನ್ನು ಮಾಡಿದ್ದಾ ರೆ ಹಾಗೇ ಪರಿಹಾರ ನೀಡಿದ ನಂತರ ಮಾಹಿತಿಯ ನ್ನು ನೀಡುವಂತೆಯೂ ಹೇಳಿದ್ದಾರೆ

ಇನ್ನೂ ಪ್ರಮುಖವಾಗಿ ಕೋವಿಡ್ ನಿಂದಾಗಿ ಮೃತ ರಾದರ ಇಲಾಖೆಯ ಸಿಬ್ಬಂದಿಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರಂತರವಾಗಿ ಪತ್ರ ಮನವಿ ಒತ್ತಾಯ ಮಾಡತಾ ಬಂದಿದ್ದು

ಇದಕ್ಕೆ ಮಣಿದ ರಾಜ್ಯ ಸರ್ಕಾರ ಈಗ ಸ್ಪಂದಿಸಿದೆ. ಕೊನೆಗೂ ಮತ್ತೊಂದು ಶಿಕ್ಷಕರ ಪರವಾಗಿ ಧ್ವನಿ ಎತ್ತಿದ ಸಂಘಕ್ಕೆ ಮತ್ತೊಂದು ಐತಿಹಾಸಿಕ ಗೆಲವು ಸಿಕ್ಕಿದ್ದು ಸ್ಪಂದಿಸದ ಹಿನ್ನಲೆಯಲ್ಲಿ ಸರ್ಕಾರಕ್ಕೆ ಧನ್ಯ ವಾದಗಳನ್ನು ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಚಂದ್ರಶೇಖರ ನುಗ್ಗಲಿ ಮತ್ತು ಸರ್ವ ಸದಸ್ಯರು ಹೇಳಿದ್ದಾರೆ