ಹುಬ್ಬಳ್ಳಿ –
ದೇಶದ ಮೊದಲ ಮಹಿಳಾ ಶಿಕ್ಷಕಿ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಆಧುನಿಕ ಶಿಕ್ಷಣದ ತಾಯಿ ಎಂದೇ ಕರೆಯಿಸಿಕೊಳ್ಳುವ ಸಾವಿತ್ರಿಬಾಯಿ ಫುಲೆ ಅವರ ಕುರಿತಾದ ಚಲನಚಿತ್ರ ವನ್ನು ಶಾಲೆಗಳಲ್ಲಿ ಮಕ್ಕಳಿಗೆ ಪ್ರದರ್ಶನ ಮಾಡಲು ಆದೇಶವನ್ನು ಮಾಡಲಾಗಿದೆ
ಹೌದು ಹುಬ್ಬಳ್ಳಿಯ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಶಾಲೆಗಳಲ್ಲಿ ಈ ಒಂದು ಚಿತ್ರವನ್ನು ಪ್ರದರ್ಶನ ಮಾಡಿಸುವಂತೆ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ. ಮಕ್ಕಳು”ಸಾವಿತ್ರಿಬಾಯಿ ಫುಲೆ” ಚಲನಚಿತ್ರ ವೀಕ್ಷಿಸಲು ಅನುಮತಿ ನೀಡಿದ್ದಾರೆ.ಇನ್ನೂ ಈ ಒಂದು ಆದೇಶವನ್ನು ನೀಡುತ್ತಿದ್ದಂತೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ದಿಂದ ರಾಜ್ಯಾಧ್ಯಕ್ಷರಾಗಿರುವ ಡಾ ಲತಾ ಎಸ್ ಮುಳ್ಳೂರು ಸಂಘದ ಸರ್ವ ಸದಸ್ಯರ ಪರವಾಗಿ ಧನ್ಯವಾದಗಳನ್ನು ಹೇಳಿದ್ದಾರೆ.