ಧಾರವಾಡ –
ಹುಬ್ಬಳ್ಳಿಯ ನವನಗರ ಪೊಲೀಸರ ಮತ್ತು ವಕೀಲ ವಿನೋದ ಪಾಟೀಲ ನಡುವಿನ ಗಲಾಟೆಯಲ್ಲಿ ವಿಚಾರದಲ್ಲಿ ನವನಗರ ಪೊಲೀಸರ ಪರವಾಗಿ ವಿವಿಧ ಸಂಘಟನೆಗಳು ಬೆನ್ನಿವೆ ನಿಂತಿವೆ. ಎಪಿಎಂಸಿ ಪೋಲಿಸ್ ಸಿಬ್ಬಂದಿ ಪರವಾಗಿ ಧಾರವಾಡದಲ್ಲಿ ಪ್ರತಿಭಟನೆ ಮಾಡಿದ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಪೊಲೀಸ್ ಸಿಬ್ಬಂದಿಗಳ ಮೇಲೆ ಕೈಗೊಂಡ ಕ್ರಮ ಹಿಂಪಡೆಯುವಂತೆ ಒತ್ತಾಯವನ್ನು ಮಾಡಿದರು.

ನವನಗರ ಎಪಿಎಂಸಿ ಪೋಲಿಸ್ ಠಾಣೆಯ ಇನ್ಸಪೆಕ್ಟರ್ ಸೇರಿದಂತೆ ಸಿಬ್ಬಂದಿಗಳ ಮೇಲೆ ತೆಗೆದುಕೊಳ್ಳಲಾದ ಕ್ರಮಗಳನ್ನು ಹಿಂಪಡೆಯಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಯಿತು.

ಪೊಲೀಸ ಸಿಬ್ಬಂದಿಗಳ ಪರ ಹಾಗೂ ನ್ಯಾಯವಾದಿಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.ಕಳೆದ ನವೆಂಬರ್ 25 ರಂದು ನ್ಯಾಯವಾದಿಯೊಬ್ಬರು ಇನ್ನಿಬ್ಬರ ಜೊತೆಯಲ್ಲಿ ಸೇರಿಕೊಂಡು ಸಾರ್ವಜನಿಕ ಪ್ರದೇಶದಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದರು ಇದನ್ನು ಬಗೆ ಹರಿಸಲು ಹೋದ ಇನಸ್ಪೇಕ್ಟರ್ ಪ್ರಭು ಸೂರಿನ್ ಮತ್ತು ಸಿಬ್ಬಂದಿಗಳ ಮೇಲೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಇದರಿಂದ ಕಾನೂನು ರೀತಿಯಲ್ಲಿ ನವನಗರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೀಗಿರುವಾಗ ತಮ್ಮ ಕರ್ತವ್ಯವನ್ನು ಮಾಡಲು ಹೋಗಿದ್ದವರ ಮೇಲೆಯೇ ಹೀಗೆ ಮಾಡಿ ಮತ್ತೇ ಅವರ ವಿರುದ್ದ ಹೋರಾಟವನ್ನು ಮಾಡ್ತಾ ಇದ್ದಾರೆಂದು ಆರೋಪಿಸಿದರು.
ಒಬ್ಬರು ನ್ಯಾಯಾದಿಯಾಗಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ನಿಂದಿಸಿ ಅವರ ಮೇಲೆ ಕ್ರಮಕ್ಕೆ ಒತ್ತಾಯ ಮಾಡಲಾಗುತ್ತಿದೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಒ್ರತಿಭಟನಾಕಾರು ಪ್ರಶ್ನೆ ಮಾಡಿದರು. ಕೂಡಲೇ ನವನಗರ ಎಪಿಎಂಸಿ ಠಾಣೆಯ ಪೊಲೀಸರ ಮೇಲೆ ತೆಗೆದುಕೊಳ್ಳುವ ಕ್ರಮಗಳನ್ನು ಅಧಿಕಾರಿಗಳು ಹಿಂದಕ್ಕೆ ಒಡೆಯಬೇಕು ಎಂದು ಅಗ್ರಹಿಸಿದರು.ಈ ಒಂದು ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆಯ ಮುಖಂಡ ಸುಧೀರ ಮುಧೋಳ ,ಮಂಜುನಾಥ ಸುತಗಟ್ಟಿ, ಚಂದ್ರು ಅಂಗಡಿ,ಜಿಲಾನಿ ಖಾಜಿ,ಸಮೀರ್ ಖಾಟೇವಾಡೆ, ಕರಿಯಪ್ಪ ಮಾಳಗಿಮನೆ ,ಪರಶುರಾಮ ದೊಡ್ಡಮನಿ ಇನ್ನೂ ದಲಿತ ಸಂಘರ್ಷ ಸಮಿತಿ ಮುಖಂಡ ಲಕ್ಷ್ಮಣ ದೊಡ್ಡಮನಿ, ಎಲ್ ಐ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.