ಚಿಕ್ಕೋಡಿ –
ಸಾಮಾನ್ಯವಾಗಿ ಕೆಲವೊಂದು ವಿಚಾರಕ್ಕೆ ಜನಪ್ರತಿನಿಧಿ ಗಳು ಹೋರಾಟ ಮಾಡೊದನ್ನು ಕೇಳಿದ್ದೇವೆ ನೋಡಿದ್ದೇವೆ ಆದರೆ ಇಲ್ಲೊಬ್ಬ ಗ್ರಾಮ ಪಂಚಾಯತಿ ಸದಸ್ಯ ಸರಾಯಿ ಗಾಗಿ ಪ್ರತಿಭಟನೆ ಮಾಡಿದ್ದಾರೆ.

ಇದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಜನಪ್ರತಿನಿ ಧಿಗಳಾದವರು ಸಮಾಜದ ಅಭಿವೃದ್ದಿಗಾಗಿ ಶ್ರೇಯೋಭಿವೃ ದ್ದಿಗಾಗಿ ಕೆಲಸ ಕಾರ್ಯಗಳನ್ನು ಮಾಡೊದನ್ನು ಕೇಳಿದ್ದೇವೆ ನೋಡಿದ್ದೇವೆ ಆದರೆ ಇಲ್ಲೊಬ್ಬ ಗ್ರಾಮ ಪಂಚಾಯತ ಸದಸ್ಯರೊಬ್ಬರು ಸರಾಯಿ ಬೇಕು ಎನ್ನುತ್ತಾ ಪ್ರತಿಭಟನೆ ಮಾಡಿದ್ದಾರೆ. ಹೌದು ಸರಾಯಿ ಬೇಕು ಎಂದು ಗ್ರಾಮಪಂಚಾಯತ ಸದಸ್ಯರೊಬ್ಬರು ಪ್ರತಿಭಟನೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಡೆದಿದೆ.ಮದ್ಯದ ಅಂಗಡಿ ಎದುರು ಪ್ರತಿಭಟನೆ ಮಾಡಿದ್ದಾರೆ.

ಮದ್ಯಪಾನಕ್ಕೆವಿರೋಧ ವ್ಯಕ್ತವಾದ ಬೆನ್ನಲ್ಲೆ ಗ್ರಾಮ ಪಂಚಾಯತಿ ಸದಸ್ಯನ ತಕರಾರು ಮಾಡಿದ್ದಾರೆ. ಕಾಗವಾಡ ಶಾಸಕ ಶ್ರೀಮಂತ ಪಾಟಿಲ ಆಪ್ತ ಅಶೋಕ ಬಾನುದಾಸ್ ಮಾನೆ ಎಂಬ ವ್ಯಕ್ತಿಯಿಂದ ಮದ್ಯ ಬೇಕು ಎಂದು ಬೇಡಿಕೆ ಕಂಡು ಬಂದಿದೆ.ನನಗೆ ದಿನಾಲು ಒಂದೂವರೆ ಕ್ವಾಟರ್ ಸರಾಯಿಬೇಕಾಗುತ್ತೆ ಅದಕ್ಕೆ ಊರಲ್ಲಿ ಮದ್ಯದ ಅಂಗಡಿ ಇರಬೇಕು ಎಂದ ಪಂಚಾಯತಿ ಸದಸ್ಯ.ಇಪ್ಪತ್ತು ಜನರೊಂದಿಗೆ ಬಾರ್ ಎದುರು ಮದ್ಯ ಬೇಕು ಎಂದು ಪ್ರತಿಭಟನೆ ಮಾಡಿದ ದೃಶ್ಯ ಕಂಡು ಬಂದಿತು.