ಪಪ್ಪಿ ಕೊಡುವೆನು ಎದ್ದು ಬನ್ನಿ ಅಪ್ಪು – ವೈರಲ್ ಆಗಿದೆ ಧಾರವಾಡದ ಪುಟ್ಟ ಬಾಲಕನ ಬರವಣೆಯ ಪೊಟೊ…..

Suddi Sante Desk

ಧಾರವಾಡ –

ಪವರ್ ಸ್ಟಾರ್ ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟ ಪುನೀತ್ ರಾಜಕುಮಾರ್ ನಿಧನಕ್ಕೆ ಬಹುತೇಕ ದೇಶದ ಮೂಲೆ ಮೂಲೆಗಳಲ್ಲಿ ಅಪಾರ ಸಂಖ್ಯೆಯಲ್ಲಿನ ಜನರು ಅವರನ್ನು ನೆನೆಯುತ್ತಿದ್ದಾರೆ.

ಅಗಲಿದ ನೆಚ್ಚಿನ ನಾಯಕ ನಟನಿಗೆ ಭಾವಪೂರ್ಣ ನಮನ ಸಲ್ಲಿಸುತ್ತಾ ಸಂತಾಪವನ್ನು ಸೂಚಿಸಿದ್ದಾರೆ.ಇನ್ನೂ ಇವೆಲ್ಲ ದರ ನಡುವೆ ಧಾರವಾಡದಲ್ಲಿ ಪುಟ್ಟ ಬಾಲಕನೊಬ್ಬನ ಪೊಟೊ ವೊಂದು ವೈರಲ್ ಆಗಿದೆ.

ಹೌದು ಒಂದನೇಯ ತರಗತಿಯಲ್ಲಿ ಓದುತ್ತಿರುವ ರಕ್ಷೀತ್ ರ ಉಳ್ಳಾಗಡ್ಡಿ ಎಂಬ ಬಾಲಕನ ಪೊಟೊ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಟಿವಿ ಗಳಲ್ಲಿ ಪುನೀತ್ ರಾಜಕುಮಾರ ಅಗಲಿಕೆಯ ಸುದ್ದಿಯನ್ನು ನೋಡಿದ ರಕ್ಷೀತ ಮನೆಯ ಗೊಡೆಯೊಂದರ ಮೇಲೆ ಪಪ್ಪಿ ಕೊಡುವೆವು ಎದ್ದು ಬನ್ನಿ ಅಪ್ಪು ಎಂದು ಬರೆದಿದ್ದಾರೆ.

ಅಲ್ಲದೇ I Lovu You Appu ಎಂದು ಬರೆದು ನೆನೆದಿ ದ್ದಾರೆ.ಪುಟ್ಟ ಬಾಲಕನ ಈ ಒಂದು ಬರವಣೆಗೆ ಈಗ ಸಾಕಷ್ಟು ವೈರಲ್ ಆಗಿದ್ದು ಗಮನ ಸೆಳೆಯುತ್ತಿದ್ದು ಇದರೊಂದಿಗೆ ಗೊಂಬೆ ಹೇಳತೈತಿ ಎನ್ನುವ ಹಾಡನ್ನು ಹಾಡುತ್ತಾ ಅಗಲಿದ ಮಹಾನ್ ನಾಯಕನಿಗೆ ಭಾವಪೂರ್ಣ ನಮನ ಸಲ್ಲಿಸಿ ನೆನೆದಿದ್ದಾರೆ.

ಒಟ್ಟಾರೆ ಪುಟ್ಟ ಬಾಲಕನೊಬ್ಬನ ಪೊಟೊವೊಂದು ಈಗ ವೈರಲ್ ಆಗಿದ್ದು ಪೊಟೊ ದಲ್ಲಿನ ಬಾಲಕನ ಬರವಣಿಗೆ ಗಮನ ಸೆಳೆಯುತ್ತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.