ಧಾರವಾಡ –
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ನೂತನ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಯನ್ನು ಪಾಲಕ ಪೋಷಕರ ಸಭೆಯನ್ನು ಜರುಗಿಸಿ ಗ್ರಾಮದ ಗ್ರಾಮ ಪಂಚಾಯತಿ ಅದ್ಯಕ್ಷರು ಉಪಾ ದ್ಯಕ್ಷರು, ಸರ್ವ ಸದಸ್ಯರು ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಪದಾಧಿಕಾರಿಗಳ ಸಮ್ಮುಖದಲ್ಲಿ ರಚನೆ ಮಾಡಲಾಯಿತು.ಅಧ್ಯಕ್ಷರಾಗಿ ಮೌಲಾಸಾಬ ದೊಡಮನಿ, ಉಪಾಧ್ಯ ಕ್ಷರಾಗಿ ಹೀನಾಕೌಸರ ಮೊರಬ ಇವರನ್ನು ಆಯ್ಕೆ ಮಾಡಲಾಯಿತು


ಉರ್ದು ಸಿ ಆರ್ ಪಿ ತೆಹಸೀನಬಾನು ಸೌದಾಗರ ಈ ಸಭೆಯಲ್ಲಿ ಹಾಜರಿದ್ದು ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಜವಾಬ್ದಾರಿ ಮತ್ತು ಕರ್ತವ್ಯಗಳ ಕುರಿತು ಸಮಗ್ರವಾಗಿ ವಿವರಿಸಿದರು, ಗ್ರಾಮ ಪಂಚಾಯತಿ ಅದ್ಯಕ್ಷರಾದ ತೇಜಸ್ವಿನಿ ತಲವಾಯಿ ಉಪಸ್ಥಿತರಿದ್ದರು, ಶಿಕ್ಷಣ ಸ್ಥಾಯಿ ಸಮಿತಿಯ ಅದ್ಯಕ್ಷರಾದ ವಿಠ್ಠಲ ಇಂಗಳೆ ನೂತನ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳ ಹೆಸರುಗಳನ್ನು ಘೋಷಿಸಿದರು,

ಸಮಿತಿಯ ಸದಸ್ಯರಾದ ನಿಂಗಪ್ಪ ಮೊರಬದ, ಸುರೇಶ ಬನ್ನಿಗಿಡದ, ಗ್ರಾಮ ಪಂಚಾಯತಿ ಸದಸ್ಯ ರಾದ ಮಂಜುನಾಥ ಭೀಮಕ್ಕನವರ, ಹಜರತಸಾಬ ನವಲಗುಂದ, ಸಿದ್ದಪ್ಪ ಕುಂಬಾರ, ಶೃತಿ ನರಗುಂದ ಗೀತಾ ದೇಸಾಯಿ,ಮಾಸಾಬಿ ಹಳ್ಳಿಕೇರಿ, ಇದ್ದರು, ಜಮಾತಿನ ಅದ್ಯಕ್ಷರಾದ ಮೆಹಬೂಬ್ ಗುಡಸಲ ಮನಿ, ಹಿರಿಯರಾದ ಪತ್ತೆಸಾಬ ಗುಡಸಲಮನಿ, ಬಾಬುಸಾಬ ಕೊಣ್ಣೂರ, ಮೌಲಾಸಾಬ ಸವಣೂರು ಮುಂತಾದವರು ಇದ್ದರು.

ಆರಂಭದಲ್ಲಿ ಮುಖ್ಯ ಶಿಕ್ಷಕಿ ಬಿ ಎಂ ಸುತಾರ ಸ್ವಾಗತಿಸಿದರು, ಲಕ್ಕಮ್ಮನವರ ನಿರೂಪಿಸಿದರು, ಕೆ ಎಂ ಶಿವಳ್ಳಿ ವಂದಿಸಿದರು, ಇದೇ ಸಂದರ್ಭದಲ್ಲಿ ಅದ್ಯಕ್ಷರಾಗಿ ಆಯ್ಕೆಯಾದ ಮೌಲಾಸಾಬ ದೊಡ ಮನಿ ಶಾಲೆಯ ಸರ್ವಾಂಗೀಣ ಪ್ರಗತಿಗಾಗಿ ಶಿಕ್ಷಕರ ಸಹಕಾರದೊಂದಿಗೆ ಅಭಿವೃದ್ಧಿ ಮಾಡುವುದರ ಜೊತೆಗೆ ಮಕ್ಕಳ ಹಾಜರಾತಿ ಹೆಚ್ಚಿಸಲು ಕ್ರಮವಹಿಸ ಲಾಗುವುದು ಎಂದರು
