ಬೈಲಹೊಂಗಲ –
ರಾಜ್ಯದಲ್ಲಿ ಕರೋನಾ ಮಹಾಮಾರಿಯ ಅಟ್ಟಹಾಸ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳ ಲ್ಲಿ ಆಕ್ರಂದನ ಸಾವು ನೋವಿನ ಪ್ರಮಾಣ ಹೆಚ್ಚಾಗು ತ್ತಿದೆ.ಇನ್ನೂ ಇವೆಲ್ಲದರ ನಡುವೆ ಕಳೆದ ವರುಷ ದಿಂದ ಆಸ್ಪತ್ರೆಗಳಲ್ಲಿ ಈಗಲೂ ದೇವರಂತೆ ಸೇವೆಯನ್ನು ವೈಧ್ಯರು ನರ್ಸ್ ಗಳು ಮತ್ತು ಇತರೆ ಸಿಬ್ಬಂದಿಗಳು ಕೆಲಸವನ್ನು ಮಾಡುತ್ತಿದ್ದು ಸೇವಾ ಮನೋಭಾವನೆಯಿಂದ ರೋಗಿಗಳ ಸೇವೆಯನ್ನು ಮಾಡುವಂತೆ ವೈಧ್ಯರ ಬಳಿ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಮನವಿ ಮಾಡಿಕೊಂಡಿದ್ದಾರೆ.

ಕರೋನಾ ಎಂಬ ಒಂದು ಈ ಸಾಂಕ್ರಾಮಿಕ ರೋಗ ಇತರೆ ಕಾಯಿಲೆಗಳಿಂದ ಜನರು ಭಯಭೀತರಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ.ತಾವು ಸೇವಾ ಮನೋಭಾವ ನೆಯಿಂದ ಉದ್ಯೋಗ ಎನ್ನದೇ ಬಡ ರೋಗಿಗಳು ಎನ್ನದೇ ಜೀವ ರಕ್ಷಣೆ ಮಾಡಿದರೆ ತಮ್ಮನ್ನು ದೇವ ರೆಂದು ಪೂಜಿಸುತ್ತಾರೆ.ಗಡಿಯಲ್ಲಿ ಯೋಧರು ದೇಶ ವನ್ನು ಹೇಗೆ ಕಾಯುತ್ತಿದ್ದರೋ ಹಾಗೇ ರೋಗಿಗಳ ರಕ್ಷಣೆಯಲ್ಲಿ ತಾವುಗಳು ಕರ್ತವ್ಯ ಮಾಡಬೇಕೆಂದು ವಿನಂತಿ ಮಾಡಿಕೊಂಡಿದ್ದಾರೆ.
ವೈಧ್ಯರಲ್ಲಿ ನರ್ಸ್ ಗಳಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಲ್ಲಿ ತಾವು ಇನ್ನೂ ಸೇವಾ ಮನೋಭಾವನೆಯಿಂದ ರೋಗಿಗಳ ಜೀವ ಕಾಪಾಡಲು ಹಗಲಿರುಳು ಶ್ರಮಿಸ ಬೆಂಕೆಂದು ವಿನಂತಿ ಮಾಡಿಕೊಂಡಿದ್ದಾರೆ.