ಧಾರವಾಡ –
ರಸ್ತೆ ಮಧ್ಯೆದಲ್ಲಿಯೇ ದೊಡ್ಡ ಪ್ರಮಾಣದ ತಗ್ಗು ಕಾಣಿಸಿಕೊಂಡ ಘಟನೆ ಧಾರವಾಡದ ಗರಗ ಗ್ರಾಮದಲ್ಲಿ ನಡೆದಿದೆ.

ಹೌದು ಗರಗ ಗ್ರಾಮದಲ್ಲಿ ರಸ್ತೆ ಮಧ್ಯದಲ್ಲಿ ಇಂಥದೊಂದು ತಗ್ಗು ಕಾಣಿಸಿಕೊಂಡಿದೆ.ಗ್ರಾಮದ ಬೈಲಹೊಂಗಲ ರಸ್ತೆಯಲ್ಲಿ ಈ ಒಂದು ತೆಗ್ಗು ಕಾಣಿಸಿಕೊಂಡು ಅಚ್ಚರಿಯನ್ನುಂಟು ಮಾಡಿದೆ.

ಏಕಾಏಕಿಯಾಗಿ ಇಂತಹ ತೆಗ್ಗು ಕಾಣಿಸಿಕೊಂಡ ಕೂಡಲೇ ಸ್ಥಳಕ್ಕೆ ಆಗಮಿಸಿದ ಗರಗ ಠಾಣೆ ಪೊಲೀಸರು ನೋಡಿದಾಗ ದೊಡ್ಡ ಪ್ರಮಾಣದಲ್ಲಿ ಶಾಕ್ ಆಗಿದೆ ಕೆಳಗಡೆ ದೊಡ್ಡ ಪ್ರಮಾಣದಲ್ಲಿ ತೆಗ್ಗು ಇರೊದು ತಿಳಿದಿದೆ.

ಕೂಡಲೇ ರಸ್ತೆ ಕುಸಿಯಬಾರದು ಎಂದು ಮುಖ್ಯ ರಸ್ತೆಯನ್ನು ಬಂದ್ ಮಾಡಲಾಗಿದೆ. ಇನ್ನೂ ಸಧ್ಯ ಸ್ಥಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜನ ಜಂಗುಳಿ ಆಗಿದ್ದು ನಿಯಂತ್ರಣ ಮಾಡಲು ಪೊಲೀಸರು ಪರದಾಡುತ್ತಿದ್ದಾರೆ.ರಸ್ತೆಯ ಮಧ್ಯದಲ್ಲಿ ಈ ಒಂದು ತೆಗ್ಗು ಕೆಳಗಡೆ ತುಂಬಾ ಆಳವಾದ ತೆಗ್ಗು ಇರೊದು ಕಂಡು ಬಂದಿದೆ.

ಸಧ್ಯ ಸ್ಥಳದಲ್ಲೇ ಪೊಲೀಸರು ಮೊಕ್ಕಾಂ ಹೂಡಿದ್ದು ಪರಿಶೀಲನೆ ಮಾಡತಾ ಇದ್ದಾರೆ.