ಬೆಳಗಾವಿ –
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾ ಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಬಿಡುಗಡೆಯಾಗುತ್ತಿದ್ದಾರೆ.ಸಧ್ಯ ಅವರಿಗೆ ಸಾಕ್ಷ್ಯ ನಾಶ ಪ್ರಕರಣದಲ್ಲೂ ಜಾಮೀನು ಸಿಕ್ಕಿದ್ದು ಹೀಗಾಗಿ ಕಳೆದ ಒಂಬತ್ತು ತಿಂಗಳಿನಿಂದ ಬೆಳಗಾವಿಯ ಹಿಂಡಗಲಾ ಜೈಲಿನಲ್ಲಿರುವ ಅವರನ್ನು ಸ್ವಾಗತ ಮಾಡಿಕೊಳ್ಳಲು ಹುಬ್ಬಳ್ಳಿ ಧಾರವಾಡ ಸೇರಿದಂತೆ ಜಿಲ್ಲೆಯಿಂದ ಅಪಾರ ಸಂಖ್ಯೆಯಲ್ಲಿ ಜನಸ್ತೋಮ ಬೆಳಗಾವಿಗೆ ತೆರಳಿದ್ದಾರೆ.


ಕಳೆದ ಎರಡು ದಿನಗಳ ಹಿಂದೆ ಜಾಮೀನು ಸಿಕ್ಕರೂ ಕೂಡಾ ಜಾಮೀನಿನ ಪ್ರತಿ ಬಾರದ ಹಿನ್ನಲೆಯಲ್ಲಿ ಇವತ್ತು ಅವರು ಬಿಡುಗಡೆಯಾಗುತ್ತಿದ್ದಾರೆ. ಇನ್ನೇನು ಹಿಂಡಗಲಾ ಜೈಲಿನಿಂದ ಬಿಡುಗಡೆಯಾಗುತ್ತಿದ್ದು ಹೀಗಾಗಿ ಹುಬ್ಬಳ್ಳಿ ಧಾರವಾಡ ಸೇರಿದಂತೆ ಜಿಲ್ಲೆಯಿಂದ ಹಾಗೇ ಬೆಳಗಾವಿಯಿಂದ ಅಪಾರ ಸಂಖ್ಯೆಯಲ್ಲಿ ಕೈ ಪಕ್ಷದ ಕಾರ್ಯಕರ್ತರು ಮುಖಂ ಡರು ನಾಯಕರು ಹಿಂಡಲಗಾ ಜೈಲಿನ ಮುಂದೆ ಆಗಮಿಸಿದ್ದಾರೆ.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಈಗಾಗಲೇ ಆಗಮಿಸಿದ್ದು ಇವರೇ ಸ್ವಾಗತ ಮಾಡಲಿದ್ದಾರೆ. ವಿನಯ ಕುಲಕರ್ಣಿ ಅವರು ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಸ್ವಾಗತಿಸಲಿದ್ದಾರೆ.

ಇನ್ನೂ ಇದರೊಂದಿಗೆ ಹುಬ್ಬಳ್ಳಿ ಧಾರವಾಡದಿಂ ದಲೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ನಾಯಕರು ಆಗಮಿಸಿದ್ದಾರೆ.ಜೈಲಿನಿಂದ ಹೊರ ಬರುತ್ತಿದ್ದಂತೆ ಹೂವು,ಶಾಲು ಹೊದಿಸಿ ಸ್ವಾಗತಿಸಲು ಸಜ್ಜಾಗಿದ್ದಾರೆ ಅಭಿಮಾನಿಗಳು.ಬಿಡುಗಡೆ ಹಿನ್ನಲೆ ಯಲ್ಲಿ ಜೈಲಿನ ಹೊರಭಾಗದಲ್ಲಿ ಬೀಗಿ ಪೊಲೀಸ್ ಭದ್ರತೆಯನ್ನು ಮಾಡಲಾಗಿದೆ.

ಜನ ಜಂಗುಳಿ ನಿಭಾಯಿಸಲು ಪೊಲೀಸರಿಂದ ಬೀಗಿ ಭದ್ರತೆ ನಿಯೋಜನೆ ಮಾಡಿದ್ದು ಇನ್ನೂ ದೊಡ್ಡ ದೊಡ್ಡ ಗಾತ್ರದ ಸೇಬಿನ ಹಾರ ಗುಲಾಬಿ ಹಾರಗ ಳೊಂದಿಗೆ ಅಪಾರ ಸಂಖ್ಯೆಯಲ್ಲಿ ಕೈ ಪಡೆ ಟೀಮ್ ಸ್ವಾಗತಿಸಲು ಸಜ್ಜಾಗಿದ್ದು ಇತ್ತ ಪೊಲೀಸರು ಕೂಡಾ ಕೆಲವೊಂದಿಷ್ಟು ಸಲಹೆ ಸೂಚನೆಗಳನ್ನು ನೀಡುತ್ತಿ ದ್ದಾರೆ.

ಇನ್ನೂ ಪ್ರಮುಖವಾಗಿ ಈವರೆಗೆ ಜಾಮೀನು ಪ್ರತಿ ಬಂದಿಲ್ಲ.ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಬಿಡುಗಡೆ ಸಾಧ್ಯತೆ ಹಿನ್ನೆಲೆ ಹಿಂಡಲಗಾ ಜೈಲಿಗೆ ಇನ್ನೂ ಬಾರದ ಜಾಮೀನು ಆದೇಶ ಪ್ರತಿ.
ನ್ಯಾಯಾಲಯದ ಜಾಮೀನು ಆದೇಶದ ಪ್ರತಿಗಾಗಿ ಕಾಯುತ್ತಿದ್ದಾರೆ ಜೈಲು ಸಿಬ್ಬಂದಿ.

ಹಿಂಡಲಗಾ ಜೈಲಿನ ಬಳಿ ಆಗಮಿಸಿದ್ದಾರೆ ಕಾಂಗ್ರೆಸ್ ನಾಯಕರು ಲಕ್ಷ್ಮೀ ಹೆಬ್ಬಾಳಕರ್,ಶಿವಶಂಕರ ಹಂಪಣ್ಣನವರ್ ಸೇರಿ ಅನೇಕ ಮುಖಂಡರ ಆಗಮಿಸಿದ್ದಾರೆ.ಹಿಂಡಲಗಾ ಜೈಲಿನ ಬಳಿ ಬೀಗಿ ಪೊಲೀಸ್ ಬಂದೋಬಸ್ತ ನಿಯೋಜನೆ ಮಾಡಲಾಗಿದೆ