ಹುಬ್ಬಳ್ಳಿ –
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರವಾಗಿ ಪಕ್ಷದ ಕಾರ್ಯಕರ್ತರು ಮುಖಂಡರು ಸೇರಿದಂತೆ ಹಲವರು ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಇನ್ನೂ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರ -73 ರಲ್ಲಿ ಬರುವ ವಾರ್ಡ ನಂಬರ 45 ರ ನಾಗಶೆಟ್ಟಿಕೊಪ್ಪದಲ್ಲಿ ಧಾರವಾಡ ಲೋಕಸಭಾ ಚುನಾವಣೆಯ ನಮ್ಮ ಅಭ್ಯರ್ಥಿಯಾದ ಪ್ರಹ್ಲಾದ್ ಜೋಶಿ ಅವರ ಪರವಾಗಿ ಪ್ರಚಾರ ಕಾರ್ಯ ಸಭೆ ಮಾಡಲಾಯಿತು.
ಈ ಸಂದರ್ಭದಲ್ಲಿ- ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಮಹೇಶ ಟೆoಗಿನಕಾಯಿ, ಮಹಾನಗರ ಪಾಲಿಕೆಯ ಮಾಜಿ ಉಪ ಮಹಾ ಪೌರರಾದ ಶ್ರೀಮತಿ ಮೇನಕಾ ಹುರಳಿ,ರಾಜ್ಯ ಎಸ್. ಟಿ. ಮೋರ್ಚಾ ಕೋಶಾದ್ಯಕ್ಷರಾದ ಮಣಿಕಂಠ ಶ್ಯಾಗೋಟಿ, ಗ್ರಾಮದ ಹಿರಿಯರಾದ ಬಸವಣ್ಣಪ್ಪ ಮೆಣಸಿನಕಾಯಿ, ಶೇಖನಗೌಡ ಸೋಮನಗೌಡ,
ಶಿವಪುತ್ರಪ್ಪ ಸಂಬರಗಿ, ಮಹದೇವಪ್ಪ ಮೆಣಸಿ ನಕಾಯಿ, ದ್ಯಾಮಣ್ಣ ಗುರಣ್ಣವರ,ರೈತ ಸಂಘದ ಅಧ್ಯಕ್ಷರಾದ ಮಾರುತಿ ಬೀಳಗಿ,ವಾರ್ಡ ಉಸ್ತು ವಾರಿಯಾದ ವಿನೋದ ರೇವಣಕರ ವಾರ್ಡ ನಂಬರ 45 ರ ಅಧ್ಯಕ್ಷರಾದ ಪ್ರವೀಣ ಹುರಳಿ,
ಶಕ್ತಿ ಕೇಂದ್ರ ಪ್ರಮುಖರಾದ ಚಂದ್ರು ನೂಲ್ವಿ ಅಶೋಕ ಬೀಳಗಿ ಹಾಗೂ 10 ಬೂತನ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಗೂ ಊರಿನ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..