ಹುಬ್ಬಳ್ಳಿ –
ಈಗಷ್ಚೇ ಗ್ರಾಮ ಪಂಚಾಯತ ಚುನಾವಣೆ ಮುಗಿಸಿ ಪ್ರಮಾಣ ಪತ್ರಗಳನ್ನು ಸ್ವೀಕಾರ ಮಾಡಿ ಅಧ್ಯಕ್ಷ ಗಾದಿಗೆ ತಯಾರಿ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಈಗಾಗಲೇ ಊರು ಬಿಟ್ಟಿದ್ದು ತೆರೆ ಮರೆಯಲ್ಲಿ ಗದ್ದುಗೆಗಾಗಿ ಗುದ್ದಾಟ ನಡೆಸುತ್ತಿದ್ದಾರೆ. ಇವೆಲ್ಲದರ ನಡುವೆ ಇಬ್ಬರು ಗ್ರಾಮ ಪಂಚಾಯತ ಸದಸ್ಯರು ತಮ್ಮನ್ನು ಆಯ್ಕೆ ಮಾಡಿದ ಗ್ರಾಮಸ್ಥರಿಗಾಗಿ ಇವರು ಗ್ರಾಮದಲ್ಲಿ ತಾವೇ ಸ್ವಚ್ಚತೆ ಮಾಡುತ್ತಿದ್ದಾರೆ.

ಹೌದು ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಅಲ್ಲಾಪೂರ ಗ್ರಾಮದಲ್ಲಿ ಜನೇವರಿ 22 ರಂದು ಗ್ರಾಮ ದೇವತೆ ಜಾತ್ರೆ ಇದೆ.

ಜಾತ್ರೆಗೆ ಅದ್ದೂರಿಯಾಗಿ ಬ್ಯಾನರ್ ಬಂಟಿಗ್ಸ್ ಮಾಡಿಸಿ ಊರ ತುಂಬೆಲ್ಲಾ ಹಾಕಿ ಎಲ್ಲರ ಹಾಗೇ ನಾವು ಜಾತ್ರೆ ಮಾಡಬಹುದು ಎನ್ನುವ ಮಾತಿನ ನಡುವೆ ಗ್ರಾಮದಿಂದ ಆಯ್ಕೆಯಾದ ಇಬ್ಬರು ಗ್ರಾಮ ಪಂಚಾಯತನ ಸದಸ್ಯರು ಜಾತ್ರೆಗಾಗಿ ತಾವೇ ಟೊಂಕ ಕಟ್ಟಿ ಸ್ವಚ್ಚತೆ ಮಾಡುತ್ತಿದ್ದಾರೆ.

ಗ್ರಾಮದಿಂದ ಆಯ್ಕೆಯಾದ ಇಬ್ಬರು ಗ್ರಾಮ ಪಂಚಾಯತನ ಸದಸ್ಯರಾದ ಮಲ್ಲಿಕಾರ್ಜುನ ರಡ್ಡೇರ ಮತ್ತು ಚಿದಾನಂದ ಪೂಜಾರ ಇವರೇ ಹೊಸದಾಗಿ ಗ್ರಾಮದಿಂದ ಆಯ್ಕೆಯಾದ ಗ್ರಾಮ ಪಂಚಾಯತ ಸದಸ್ಯರಾಗಿದ್ದು ಇನ್ನೂ ಗ್ರಾಮ ಪಂಚಾಯತಗೆ ಒಮ್ಮೆಯೂ ಕಾಲಿಟ್ಟಿಲ್ಲ ಸಭೆ ಮಾಡಿಲ್ಲ ಆಗಲೇ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆ ಬಂದಿದ್ದು ಅವರಿವರಿಗೆ ಹೇಳಲಾರದೆ ತಾವೇ ಅಖಾಡಕ್ಕಿಳಿದು ಕೈಯಲ್ಲಿ ಸಲಿಕೆ ಕಸಬರಗಿ ಹಿಡಿದುಕೊಂಡು ಸ್ವಚ್ಚತೆ ಮಾಡುತ್ತಿದ್ದಾರೆ.

ಇಬ್ಬರು ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರು ಇಬ್ಬರಿಗೂ ಗ್ರಾಮಸ್ಥರು ಆಶಿರ್ವಾದವನ್ನು ಮಾಡಿದ್ದು ಹೀಗಾಗಿ ಗ್ರಾಮದ ಗ್ರಾಮಸ್ಥರ ಖುಣವನ್ನು ತೀರಿಸುವ ಉದ್ದೇಶ ಮತ್ತು ಸಧ್ಯ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆ ಬಂದಿದೆ ಹೀಗಾಗಿ ಗ್ರಾಮವನ್ನೇಲ್ಲಾ ಪಂಚಾಯತ ಸಿಪಾಯಿ ಮಲ್ಲಪ್ಪ ಮತ್ನಾಳ ಅವರೊಂದಿಗೆ ಸೇರಿಕೊಂಡು ಕ್ಲೀನ್ ಮಾಡುತ್ತಿದ್ದಾರೆ.

ಕಳೆದ ಎರಡು ಮೂರು ದಿನಗಳಿಂದ ಮೂವರು ಸೇರಿಕೊಂಡು ಅಲ್ಲಾಪೂರ ಗ್ರಾಮದಲ್ಲಿ ಸ್ವಚ್ಚತೆ ಮಾಡುತ್ತಿದ್ದು ಇವರ ಕಾರ್ಯವನ್ನು ನೋಡಿದರೆ ಇಡೀ ಗ್ರಾಮಸ್ಥರು ನಾವು ಇಂಥವರನ್ನು ಆಯ್ಕೆ ಮಾಡಿದ್ದು ಸಾರ್ಥಕವಾಯಿತು ಎಂದುಕೊಳ್ಳುತ್ತಿದ್ದು

ನಿಜಕ್ಕೂ ಗ್ರಾಮವೇ ಗ್ರಾಮಸ್ಥರೇ ಮೆಚ್ಚುವಂತಹ ಕೆಲಸವನ್ನು ಇಬ್ಬರು ಪಂಚಾಯತ ಸದಸ್ಯರು ಮಾಡುತ್ತಿದ್ದು ಅದರಲ್ಲೂ ತಾವೇ ಕ್ಲೀನ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು ಇವರ ಕಾರ್ಯ ಇತರರಿಗೆ ಮಾದರಿಯಾದರೆ ಹಿರಿಯರು ಕಂಡ ಕನಸು ಸಾರ್ಥಕವಾಗುತ್ತದೆ.