ಧಾರವಾಡ –
ಯೋಗಿಶಗೌಡ ಕೋಲೆ ಪ್ರಕರದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಧಾರವಾಡ ಮೂರನೇಯ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.ಜಾಮೀನು ಅರ್ಜಿ ವಿಚಾರಯನ್ನು ಇಂದು ಬೆಳಿಗ್ಗೆ ವಿಚಾರಣೆ ಮಾಡಿದ ನ್ಯಾಯಾಧೀಶರು ಮಧ್ಯಾಹ್ನ ಮುಂದೂಡಿದರು. ಮತ್ತೆ ವಿಚಾರಣೆ ಕೈಗೊಂಡು ಅರ್ಜಿಯನ್ನು ಡಿಸೆಂಬರ್ 7 ಕ್ಕೇ ಮುಂದುಡಿದರು. ಇನ್ನೂ ಮಾಜಿ ಸಚಿವ ವಿನಯ ಕುಲಕರ್ಣಿ ಸಹೊದರ ವಿಜಯ ಕುಲಕರ್ಣಿ ಸೋದರ ಮಾವ ಸೋಮಶೇಖರ್ ಇಂಡಿ,
ಆಪ್ತ ಕಾರ್ಯದರ್ಶಿಯಾಗಿದ್ದ ಸೋಮು ನ್ಯಾಮಗೌಡ ಮೂವರಿಗೆ ಸುಳ್ಳು ಪತ್ತೆ ಪರೀಕ್ಷೆಗಾಗಿ ಸಿಬಿಐ ರವರು ನೋಟಿಸ್ ನೀಡಿದರು. ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಮೂವರು ನ್ಯಾಯಾಲಯಕ್ಕೆ ಹಾಜರಾದರು.ಈ ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಾಧೀಶರು ವಿಚಾರಣೆಯನ್ನು ಮುಂದುಡಿದರು ಸುಳ್ಳು ಪತ್ತೆ ಪರೀಕ್ಷೆ ಅರ್ಜಿ ವಿಚಾರಣೆ ಡಿಸೆಂಬರ್ -7 ಮುಂದೂಡಲಾಯಿತು.