ಬೆಂಗಳೂರು –
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಉಣಕಲ್ ಕೆರೆ, ತೋಳನಕೆರೆ,ಕೆಲಗೇರಿ ಕೆರೆ,ಸಾಧನಕೇರಿ ಕೆರೆ,ಕೋಳಿ ಕೆರೆಗಳ ಒತ್ತುವರಿ ತೆರವುಗೊಳಿಸಲು ನಿರ್ದೇಶಿಸಬೇಕು ಎಂದು ಕೋರಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಧಾರವಾಡ ಜಿಲ್ಲಾಧಿಕಾರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕ ರೈತ ಸೇನಾ ಅಧ್ಯಕ್ಷ ವೀರೇಶ ಸೊರಬದಮಠ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ನಂತರ ನೋಟೀಸ್ ನೀಡುವಂತೆ ಸೂಚನೆ ನೀಡಿದರು. ಪ್ರತಿವಾದಿಗಳಾದ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸಾರ್ವಜನಿಕ ಜಮೀನು ಗಳ ನಿಗಮ ನಿಯಮಿತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಧಾರವಾಡ ಉಪವಿಭಾಗಾಧಿಕಾರಿ, ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾ ಪಕ ನಿರ್ದೇಶಕ ಹಾಗೂ ಭೂ ದಾಖಲೆಗಳ ಉಪ ನಿರ್ದೇಶ ಕರಿಗೂ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯ ಪೀಠ ವಿಚಾರಣೆ ಮುಂದೂಡಿದೆ.ಅರ್ಜಿದಾರರ ಪರ ವಕೀಲ ಗೌತಮ್ ಶ್ರೀಧರ್ ಭಾರದ್ವಾಜ್ ವಕಾಲತ್ತು ವಹಿಸಿದ್ದರು.
ಇನ್ನೂ ಪ್ರಮುಖವಾಗಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕೆರೆಗಳನ್ನು ಒತ್ತುವರಿ ಮಾಡ ಲಾಗಿದೆ.ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪಿಯಲ್ಲಿ 35 ಕೆರೆಗಳ ಒತ್ತುವರಿಯಾಗಿದೆ.ಉಣಕಲ್ ಕೆರೆ,ತೋಳನಕೆರೆ,ಕೆಲಗೇರಿ ಕೆರೆ,ಸಾಧನಕೇರಿ ಕೆರೆ,ಕೋಳಿ ಕೆರೆಗಳನ್ನು ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಮಾಡಲಾ ಗಿದೆ.ಈ ಸಂಬಂಧ 2020ರ ಫೆಬ್ರುವರಿ 17 ಮತ್ತು ಜೂನ್ 5ರಂದು ಸಂಬಂಧಿಸಿದ ಇಲಾಖೆಗಳು ಮತ್ತು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರೂ ಕ್ರಮ ಜರುಗಿಸಿಲ್ಲ ಎಂದು ಅರ್ಜಿದಾ ರರು ದೂರಿದ್ದಾರೆ.