ಬೆಳಗಾವಿ –
ಪ್ರಧಾನ ಗುರುಗಳ ಬಡ್ತಿ ವಿಷಯವಾಗಿ ಬೆಳಗಾವಿ ಯ ಉಪ ನಿರ್ದೇಶಕ ರಾದ ಬಿ.ಎಂ.ನಾಲತವಾಡರವರನ್ನು ಈ ದಿನ ಭೇಟಿಮಾಡಿ ಶಿಕ್ಷಕರ ಕೆಲವೊಂದಿಷ್ಟು ವಿಷಯಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

- ಪಟ್ಟಿಗಳಲ್ಲಿರುವ ನ್ಯೂನತೆಗಳಿಗೆ ಸಂಬಂಧಿಸಿದಂತೆ ಬಂದಿರುವ ಆಕ್ಷೇಪಣೆಗಳಿಗೆ ತಪ್ಪದೇ ಕ್ರಮಕೈಗೊಂಡು ದೋಷರಹಿತ ಪಟ್ಟಿಯನ್ನು ತಯಾರಿಸಲು ಎಲ್ಲಾ ತಾಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲು ತಿಳಿಸಲಾಯಿತು.
- ABC ಸ್ಥಳಾಂತರ ಕೌಂಸಲಿಂಗ ಮಾಡಿ ಇಲ್ಲಾ ABC ಮೂರೂ ವಲಯಗಳನ್ನು OPEN ಇಟ್ಟು ಕೌಂಸಲಿಂಗ ಮಾಡುವಂತೆ ಚರ್ಚಿಸಲಾಯಿತು.
- ನಾಳೆ ದಿ.27 ರಂದು ತಪ್ಪದೇ ಅಂತಿಮ ಪಟ್ಟಿ ಹಾಗೂ ಖಾಲಿಹುದ್ದೆಗಳ ಪಟ್ಟಿಗಳನ್ನು ಪ್ರಕಟಪಡಿಸಲು ಕೋರಲಾಯಿತು.
- ಮೊದಲೇ ಸೂಚಿಸಿದಂತೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವಿಭಜನೆ ಮಾಡುವ ಮುಂಚಿತವಾಗಿ ಸೇವೆಗೆ ಸೇರಿದ ಶಿಕ್ಷಕರನ್ನು ಸೇವಾ ಜೇಸ್ಥತೆಗೆ ಪರಿಗಣಿಸಲು ಈಗಾಗಲೇ ಕ್ರಮಕೈಗೊಂಡಿದ್ದು ಅದರಂತೆ ಪಟ್ಟಿಯಲ್ಲಿ ಸೇರ್ಪಡೆ ಆಗಿರುವುದನ್ನು ಖಚಿತಪಡಿಸುವಂತೆ ಕೋರಲಾಗಿದೆ.
- ಶಿಕ್ಷಕರ ಆಕ್ಷೇಪಣೆಗಳಿಗೆ ಸ್ಪಷ್ಟೀಕರಣದೊಂದಿಗೆ ಅರ್ಜಿ ವಿಲೇವಾರಿ ಮಾಡುವಂತೆ ಕೊರಲಾಯಿತು.
6)ಈಗಾಗಲೇ ಪ್ರಕಟಿಸಿರುವ ಪಟ್ಟಿ ಜಿಲ್ಲೆಯ ಸಮಗ್ರ ಪಟ್ಟಿ ಇರುತ್ತದೆ.. ಅಂತಿಮ ಪಟ್ಟಿ ಪ್ರಕಟವಾದ ಸಂದರ್ಭದಲ್ಲಿ ಮೃತ..ವರ್ಗಾವಣೆ..ಸ್ವಯಂ ನಿವೃತ್ತಿ ಮತ್ತು ನಿವೃತ್ತಿ ಶಿಕ್ಷಕರ ಹೆಸರೂ ಕೂಡ ಇದ್ದು…ಕೌನ್ಸಲಿಂಗ್ ಸಂದರ್ಭದಲ್ಲಿ ಈ ಶಿಕ್ಷಕರ ಹೆಸರು ಕೈಬಿಟ್ಟು ಪರಿಷ್ಕೃತ ಪಟ್ಟಿ ಯೊಂದಿಗೆ ಕೌನ್ಸಲಿಂಗ್ ಜರುಗುವದು…ಇದರ ಬಗ್ಗೆ ಯಾರೂ ಗೊಂದಲ ಮಾಡಿಕೊಳ್ಳಬೇಡಿ ಎಂದು ಜಿಲ್ಲಾ ಸಂಘ ಕೋರುತ್ತದೆ…
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನೆಯಿಂದ ಜಯಕುಮಾರ ಹೆಬಳಿ.ವಾಯ್.ಬಿ.ಪೂಜಾರ. ಕೆ.ಎಸ್.ರಾಚಣ್ಣವರ.ಗ್ರಾಮೀಣ ಅಧ್ಯಕ್ಷರಾದ ಪ್ರಕಾಶ ದೇಯಣ್ಣವರ..ನಗರ ಅಧ್ಯಕ್ಷರಾದ ಬಾಬು ಸೊಗಲಣ್ಣವರ..ನೌಕರ ಸಂಘದ ಜಿಲ್ಲಾ ನೌಕರ ಸಂಘದ ನಿರ್ದೇಶಕರಾದ ಆರ್.ವಿ.ಹೈಬತ್ತಿ ಹಾಜರಿದ್ದರು…