ಧಾರವಾಡದಲ್ಲಿ ಅರ್ಥಪೂರ್ಣವಾಗಿ ನಡೆಯಿತು ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ – ಕಾರ್ಯಕ್ರಮ ಕುರಿತು ಪಿ ಎಫ್ ಗುಡೇನಕಟ್ಟಿ ಅವರಿಂದ ಒಂದು ವಿಶೇಷ ವರದಿ…..

Suddi Sante Desk
ಧಾರವಾಡದಲ್ಲಿ ಅರ್ಥಪೂರ್ಣವಾಗಿ ನಡೆಯಿತು ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ – ಕಾರ್ಯಕ್ರಮ ಕುರಿತು  ಪಿ ಎಫ್ ಗುಡೇನಕಟ್ಟಿ ಅವರಿಂದ ಒಂದು ವಿಶೇಷ ವರದಿ…..

ಧಾರವಾಡ

ಶೈಕ್ಷಣಿಕ ಪ್ರಗತಿಯೊಂದೇ ಸಮುದಾಯದ ಉನ್ನತಿಗೆ ಕಾರಣ ಮುಸ್ಲಿಂ ಸಮುದಾಯವು ಶೈಕ್ಷಣಿಕವಾಗಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು ಪ್ರಗತಿ ಹೊಂದಲು ಶೈಕ್ಷಣಿಕ ಜಾಗೃತಿಯೊಂದೇ ಪರಿಹಾರ ಮತ್ತು ಸಮುದಾ ಯಕ್ಕೆ ನೌಕರರ ಕೊಡುಗೆ ಅವಶ್ಯಕ ಎಂದು ವೈಶುದೀಪ ಪೌಂಡೇಶನ್ ದ ಅಧ್ಯಕ್ಷರಾದ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಹೇಳಿದರು.

ಧಾರವಾಡದ ನೌಕರರ ಭವನದಲ್ಲಿ ನಡೆದ ಮುಸ್ಲಿಂ ಮುಖಂಡರಿಗೆ ಒಂದು ದಿನದ ಕಾರ್ಯಾ ಗಾರ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧಕರಿಗೆ ಗರಿಷ್ಠ ದಾಖಲಾತಿ ಹೊಂದಿದ ಶಾಲೆಗಳಿಗೆ ಸನ್ಮಾನ ಸಮಾರಂಭದಲ್ಲಿ 124 ವಿದ್ಯಾರ್ಥಿಗಳಿಗೆ ಸನ್ಮಾನ, 20 ಶಾಲೆಗಳಿಗೆ ಪ್ರಶಸ್ತಿ ಮತ್ತು 17 ಜನ ವಿಶೇಷ ಸಾಧಕರಿಗೆ ಪುರಸ್ಕರಿಸಲಾಯಿತು

ಮುಖ್ಯ ಅತಿಥಿಗಳಾದ AIPTF ಕಾರ್ಯಾಧ್ಯಕ್ಷ ರಾದ ಬಸವರಾಜ ಗುರಿಕಾರ ರವರು ಮಾತನಾಡಿ ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ನೌಕರರ ಮತ್ತು ಶಿಕ್ಷಕರ ಸಂಘಟನೆಗಳಲ್ಲಿ ಮುಸ್ಲಿಂ ಸಮು ದಾಯಕ್ಕೆ ಆದ್ಯತೆಯನ್ನು ನೀಡಬೇಕು. ಒಗ್ಗಟ್ಟಾಗಿ ಮುಂದುವರೆಯಿರಿ & ಸಂಘದ ಚಟುವಟಿಕೆ ಗಳಿಗೆ ಸದಾ ಬೆಂಬಲ‌ ಇರುತ್ತೆ ತಿಳಿಸಿದರು

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಎಸ್ ಎಫ್ ಸಿದ್ಧನಗೌಡ್ರ ಅವರು ಮಾತನಾಡಿ ಈ ಸಂಘವು ಕ್ರಿಯಾಶೀಲವಾಗಿ ಸೇವೆ ಸಲ್ಲಿಸುತ್ತಿದ್ದು ತನ್ನ ಕಾರ್ಯಗಳ ಮೂಲಕ ಸದಸ್ಯರ ಮನಗೆದ್ದಿದೆ ಎಂದರು.

ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಜನಾಬ ಮಹಮದ್ ಸಲೀಮ್ ಹಂಚಿನಮನಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಮುದಾ ಯಕ್ಕೆ ನಾವು ನಮ್ಮ ಕೊಡುಗೆಯನ್ನು ನೀಡುತ್ತಾ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿಗಾಗಿ ಸಂಘದ ಸ್ಥಾಪನೆಯಾಗಿದೆ ಎಂದರು.

ಜನಾಬ ಅಬ್ದುಲ್ ಮೆಣಸಗಿ ಯವರು ನೌಕರರು ಶಿಕ್ಷಕರ ವಿವಿಧ ಬೇಡಿಕೆಗಳನ್ನು ಮಂಡಿಸಿ ಈಡೇರಿ ಸಲು ಒತ್ತಾಯಿಸಿದರು.ಜಿಲ್ಲಾಧ್ಯಕ್ಷರಾದ ಆರ್ ಎಂ ದಫೇದಾರರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನೌಕರರ ಹಿತ ಕಾಪಾಡುವು ದರ ಜೊತೆಗೆ ಸಮುದಾಯಕ್ಕೆ ಶೈಕ್ಷಣಿಕ ಮಹತ್ವ ವನ್ನು ತಿಳಿಸುವ ಕಾರ್ಯ ಮಾಡುತ್ತಾ ಸಮುದಾ ಯದ ಪ್ರತಿಭೆಗಳನ್ನು ಇಂತಹ ಕಾರ್ಯಕ್ರಮದ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಮುಸ್ಲಿಮ್ ಸಮುದಾಯಕ್ಕೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ವಿವಿಧ ಇಲಾಖೆಗಳ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರ ನಡೆಸಲಾಯಿತು

ಈ ಸಮಾರಂಭದಲ್ಲಿ ದೇವಿದಾಸ್ ಶಾಂತಿಕರ  ಎಂ ಯು ಶಿರಹಟ್ಟಿ, ಎಸ್ ಎಂ ಹುಡೇದಮನಿ, ಅಕ್ಬರ್ ಅಲಿ ಖಾಜಿ, ಶ್ರೀಮತಿ ಫರೀದಾ ನದಾಫ್, ಶಾನವಾಜ್ ಪಠಾಣ್, ಶ್ರೀಮತಿ ಸಲೀಮಾಬಿ ಕೋಳೂರ, ಶ್ರೀಮತಿ ನಫೀಸಾ ದಾವಲಸಾಬನ ವರ,ಶ್ರೀಮತಿ ಫರ್ಹಾತ್ ಜಲಗೇರಿ, ಜುಬೇರ್ ಖಂಡುನಾಯ್ಕ್,ಎ ಎ ಚಕೋಲಿ, ಎ ಕೆ ಮುಜಾವರ,ಎನ್ ಆರ್ ಪಟೇಲ್, ಸಂಗ್ರೇಶ ಕೊಪ್ಪ,ಅಕ್ಬರ್, ಎ ಆರ್ ಅಕ್ಕಿ,ಜಿಮಖಾನೆ, ನಸ್ರೀನ್ ಪಾಚಾಪುರ,ಜಾವೇದ್,ಶ್ರೀಮತಿ ಅಬಿದಾ ಮುಲ್ಲಾ,ಅಬುತಾಹೀರ್ ಮುಲ್ಲಾ, ಜಾವೇದ್ ಖತೀಬ್ ಅವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು*

ಪ್ರಧಾನ ಕಾರ್ಯದರ್ಶಿ ಎಂ ಕೆ ಘೋಡೆಸವಾರ ಅವರು ಸ್ವಾಗತಿಸಿದರು‌. ಜನಾಬ್ ಕೆ ಎಂ ಶೇಖ್ ಕಾರ್ಯಕ್ರಮ ನಿರೂಪಿಸಿದರು, ಖಜಾಂಚಿ ಜನಾಬ್ ಪಿ ಎಫ್ ಗುಡೇನಕಟ್ಟಿ ವಂದಿಸಿದರು

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.