ಧಾರವಾಡ –
ಹೌದು ದಿನದಿಂದ ದಿನಕ್ಕೆ ಮಹಾಮಾರಿಯ ಆರ್ಭಟ ಹೆಚ್ಚಾಗುತ್ತಿದೆ.ಎಲ್ಲಿ ನೋಡಿದಲ್ಲಿ ಕೇಳಿದಲ್ಲಿ ಇದರ ದ್ದೇ ಮಾತು ಕತೆ.ಇಂಥಹ ಭಯಾನಕ ಪರಿಸ್ಥಿತಿಯ ನಡುವೆ ಇದನ್ನು ನಿಯಂತ್ರಣ ಮಾಡಲು ಈಗಾಗಲೇ ಲಾಕ್ ಡೌನ್ ಜಾರಿಗೆ ಮಾಡಲಾಗಿದೆ.ಇನ್ನೂ ಇದ ರೊಂದಿಗೆ ಇದನ್ನು ನಿಯಂತ್ರಣ ಮಾಡಲು ಮಾಸ್ಕ್ ಹಾಕೊಳ್ಳಿ,ಸಾಮಾಜಿಕ ಅಂತರ ಕಾಪಾಡಿ ಅಂತಾ ಎಷ್ಟೋ ಹೇಳಿದರು ಹೇಳಿದ್ದೆ ಹೇಳಿದ್ದು ಆದರೂ ನಮ್ಮ ಜನ ಸುಧಾರಿಸುತ್ತಿಲ್ಲ.

ಇವೆಲ್ಲದರ ನಡುವೆ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಮಾಸ್ಕ್ ವಿಚಾರ ಕುರಿತು ವಿಶೇಷ ಸಂದೇಶ ಕೊಟ್ಟಿದ್ದಾರೆ ಹೌದು ದಯವಿಟ್ಟು ಮಾಸ್ಕ ಬಳಿಸಿ, ಜೀವ ಉಳಿಸಿ. ಎಂದು ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸಂದೇ ಶ ಕೊಟ್ಟಿದ್ದಾರೆ

ಪತ್ನಿಯೊಂದಿಗೆ ಮಾಸ್ಕ್ ಧರಿಸಿರುರುವ ಇವರು ದಯವಿಟ್ಟು ಮಾಸ್ಕ್ ಬಳಸಿ ಜೀವ ಉಳಿಸಿ ಎಂಬ ಸಂದೇಶ ದೊಂದಿಗೆ ಸಾರ್ವಜನಿಕರು ಮತ್ತು ಅವರ ಇಲಾಖೆಯ ಶಿಕ್ಷಕರಲ್ಲಿ ಕರೆ ನೀಡಿದ್ದಾರೆ

ಪೊಟೊ ದೊಂದಿಗೆ ಫೇಸ್ ಬುಕ್ ನಲ್ಲಿ ಒಂದು ಪೊಸ್ಟ್ ಮಾಡಿ ಸಾಮಾಜಿಕ ಸಂದೇಶದೊಂದಿಗೆ ಸಾರ್ವಜನಿಕರಲ್ಲಿ ಕರೆ ನೀಡಿದ್ದಾರೆ. ಸಧ್ಯದ ಪರಿಸ್ಥಿತಿ ಯಲ್ಲಿ ಎದುರಾಗಿರುವ ಚಿತ್ರಣವನ್ನು ಒಮ್ಮೆ ನೋಡಿ ದರೆ ನಾವುಗಳು ತುಂಬಾ ತುಂಬಾ ಅಪಾಯಕಾರಿ ಪರಿಸ್ಥಿತಿಯಲ್ಲಿ ಇದ್ದೇನಿ ಹೀಗಾಗಿ ಇವರ ಒಂದು ಸಂದೇಶವನ್ನು ಬಳಸಿಕೊಂಡರೆ ಮಹಾಮಾರಿ ಯಿಂದ ಪಾರಾಗಬಹುದು