ಧಾರವಾಡ –

ಧಾರವಾಡದ ಶಿವಾನಂದ ನಗರ 2 ನೇ ಕ್ರಾಸ್ ನಿವಾಸಿ ಪ್ರಣವ ಬಸವರಾಜ ತಿರಕನಗೌಡ (17) ಜೂನ್ 13 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾನೆ. 5 ಅಡಿ 7 ಇಂಚು ಎತ್ತರ,ದುಂಡು ಮುಖ,ಸದೃಡ ಮೈಕಟ್ಟು,ಗೋಧಿ ಮೈಬಣ್ಣ,ತಲೆಯಲ್ಲಿ 2 ಇಂಚಿನ ಕಪ್ಪು ಕೂದಲು ಇರುತ್ತವೆ. ಹೊಟ್ಟೆಯ ಮೇಲೆ ಮಚ್ಚೆಯ ಕಲೆ ಇದೆ ಹಾಗೂ ಬ್ಲೂ ಕಲರ್ ನೈಟ್ ಪ್ಯಾಂಟ್,ಬೂದು ಬಣ್ಣದ ಜರ್ಕಿನ್ ಹಾಗೂ ಕಪ್ಪು ಬಣ್ಣದ ಟೋಪಿ ಧರಿಸಿರುತ್ತಾನೆ. ಈ ಯುವಕನು ಕನ್ನಡ, ಹಿಂದಿ ಹಾಗೂ ಇಂಗ್ಲೀಷ ಭಾಷೆ ಮಾತನಾಡುತ್ತಾನೆ. ಯುವಕನಸುಳಿವು ಸಿಕ್ಕವರು ತಕ್ಷಣ ಧಾರವಾಡ ವಿದ್ಯಾಗಿರಿ ಪೋಲಿಸ್ ಠಾಣೆ ಅಥವಾ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಬಹುದು. ದೂರವಾಣಿ 08362233513, 9480802034, 08362233555 ಸಂಪರ್ಕಿಸಲು ವಿದ್ಯಾಗಿರಿ ಪೋಲೀಸ್ ಠಾಣಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
.