ಧಾರವಾಡ –
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಧಾರವಾಡಗೆ ಕರೆದುಕೊಂಡು ಬರಲಾ ಗಿದೆ ಈಗಾಗಲೇ ಈ ಒಂದು ಪ್ರಕರಣದಲ್ಲಿ ಬಂಧನ ವಾಗಿ ಬೆಳಗಾವಿಯ ಜೈಲಿನಲ್ಲಿರುವ ಇಂದು ಇವರ ನ್ನು ಧಾರವಾಡಕ್ಕೆ ಕರೆದುಕೊಂಡು ಬರಲಾಗಿದೆ
ಬೆಳಗಾವಿಯ ಹಿಂಡಲಗಾ ಜೈಲಿನಿಂದ ಭದ್ರತೆಯ ನಡುವೆ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಯೋಗೀಶಗೌಡ ಹತ್ಯೆಯ ಸಿಬಿಐ ತನಿಖೆಯಲ್ಲಿ ಜೈಲು ಸೇರಿರೋ ವಿನಯ ಕಳೆದ 9 ತಿಂಗಳಿನಿಂದ ಜೈಲಿನಲ್ಲಿದ್ದಾರೆ ವಿನಯ ಕುಲಕರ್ಣಿ.ಪತ್ನಿ ಶಿವಲೀ ಲಾ ಅವರಿಗೆ ಜಿಪಿಎ ನೀಡಲು ಆಗಮಿಸಿದ್ದಾರೆ.
ಜಿಪಿಎ ಸಾಮಾನ್ಯ ಅಧಿಕಾರ ಪತ್ರವಾಗಿದ್ದು ಜನಪ್ರತಿ ನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿ ದ್ದರು ವಿನಯ ಕುರಕರ್ಣಿ ಕೋರಿಕೆಗೆ ಅನುಮತಿ ಯನ್ನು ನ್ಯಾಯಾಲಯ ನೀಡಿದೆ.ಧಾರವಾಡದ ಉಪ ನೋಂದಣಾಧಿಕಾರಿ ಕಚೇರಿಗೆ ಇಂದು ಆಗಮಿಸಿದ್ದಾರೆ.ನಗರದ ಮಿನಿ ವಿಧಾನ ಸೌಧ ಕಟ್ಟಡದಲ್ಲಿದೆ ಈ ಒಂದು ಕಚೇರಿ ಉಪನೋಂದಣಾ ಧಿಕಾರಿ ಕಚೇರಿಗೆ ವಿನಯ ಆಗಮನ ಹಿನ್ನೆಲೆಯಲ್ಲಿ ಕಚೇರಿಗೆ ಪೊಲೀಸ್ ಬಿಗಿ ಬಂದೋಬಸ್ತ್ ನ್ನು ಮಾಡಲಾಗಿದೆ.
ಮಿನಿ ವಿಧಾನಸೌ ಧದಲ್ಲಿರೋ ಕಚೇರಿ ಕಚೇರಿ ಬಳಿ ವಿನಯ ಬೆಂಬ ಲಿಗರು ಸೇರೋ ಸಾಧ್ಯತೆ ಹಿನ್ನಲೆ ಯಲ್ಲಿ ಭದ್ರತೆ ಯನ್ನು ಒದಗಿಸಲಾಗಿದೆ ಸಾಧ್ಯತೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇನ್ನೂ ಡಿಸಿಪಿ ರಾಮರಾಜನ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದ್ದು ವಿನಯ ಕುಲಕರ್ಣಿ ಆಗಮಿಸಿ ಕಚೇರಿಯಲ್ಲಿ ಪತ್ನಿಗೆ ಜಿಪಿಎ ಅನ್ನು ನೀಡಿದರು.
ನಂತರ ಬ್ಯಾಂಕ್ ಗೆ ಕರೆದುಕೊಂಡು ಹೋಗಿ ಅಲ್ಲೂ ಕೂಡಾ ಬ್ಯಾಂಕ್ ನ ಖಾತೆಗಳನ್ನು ಬದಲಾವಣೆ ಮಾಡಿ ಪತ್ನಿಗೆ ಸಂಪೂರ್ಣವಾದ ಅಧಿಕಾರವನ್ನು ನೀಡಲಿದ್ದು ಇಲ್ಲೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು ನಂತರ ನೇರವಾಗಿ ಬೆಳಗಾವಿಯ ಜೈಲಿಗೆ ಪೊಲೀಸರು ಕರೆದುಕೊಂಡು ಹೋಗಲಿದ್ದಾರೆ.