ಹುಬ್ಬಳ್ಳಿ –
ಪೊಲೀಸ್ ಜೀಪ್ ವಾಹನವೊಂದನ್ನು ಕಳ್ಳತನ ಮಾಡಿದ ಘಟನೆ ಧಾರವಾಡದ ಅಣ್ಣಿಗೇರಿ ಪಟ್ಟಣದಲ್ಲಿ ನಡೆದಿದೆ. ಪ್ರತಿದಿನ ಪೊಲೀಸ್ ಠಾಣೆಗೆ ಜೀಪ್ ಕ್ಲೀನ್ ಮಾಡಲು ಬರುತ್ತಿದ್ದ ನಾಗಪ್ಪ ಹಡಪದ ಎಂಬುವನೇ ಜೀಪ್ ನೊಂದಿಗೆ ಎಸ್ಕೇಪ್ ಆಗಿದ್ದಾನೆ ಭೂಪ.ಅಣ್ಣಿಗೇರಿ ಪಟ್ಟಣ ದಲ್ಲಿ ಈ ಒಂದು ಘಟನೆ ನಡೆದಿದೆ.

ಪ್ರತಿದಿನ ಪೊಲೀಸ್ ವಾಹನವನ್ನು ಕ್ಲೀನ್ ಮಾಡಲು ಠಾಣೆ ಗೆ ಬರುತ್ತಿದ್ದನು ನಾಗಪ್ಪ.ನಾಗಪ್ಪ ಹಡಪದ ಎಂಬುವರಿಂದ ಈ ಒಂದು ಕಳ್ಳತನ ನಡೆದಿದೆ.ಪೊಲೀಸ್ ಠಾಣೆ ಯಿಂದ ಪೊಲೀಸ್ ಜೀಪ್ ನೊಂದಿಗೆ ಎಸ್ಕೇಪ್ ಆಗಿದ್ದು ಸುದ್ದಿ ತಿಳಿದ ಅಣ್ಣಿಗೇರಿ ಪೊಲೀಸರು ಎದ್ದೋ ಬಿದ್ದೆ ಎನ್ನುತ್ತಾ ಓಡಿದರು.ಎಸ್ಕೇಪ್ ಆಗುತ್ತಿದ್ದಂತೆ ಹಿಡಿದು ಕರೆದುಕೊಂಡು ಬಂದಿದ್ದಾರೆ ಪೊಲೀಸರು.ಪೊಲೀಸ್ ಜೀಪ್ ನೊಂದಿಗೆ ನಾಗಪ್ಪನನ್ನು ಬಂಧನ ಮಾಡಲಾಗಿದೆ.ನಾಗಪ್ಪ ಅಣ್ಣಿಗೇರಿ ಪಟ್ಟಣದ ನಿವಾಸಿತಾಗಿದ್ದು ಅಣ್ಣಿಗೇರಿ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ