ಬೆಂಗಳೂರು –
ಹೌದು ಇದೊಂದು ಮಗಳನ್ನು ಕಳೆದುಕೊಂಡು ಹೆಸರು ಅಷ್ಟೇ ಗೊತ್ತಿದ್ದು ಬೇರೆನು ಗೊತ್ತಿಲ್ಲದೇ ಮಗಳನ್ನು ಹುಡು ಕಿಕೊಡಿ ಎಂದು ಬೆಂಗಳೂರಿನ ಪುಲಕೇಶಿ ನಗರದ ಪೊಲೀಸರ ಬಳಿ ಬಂದಿದ್ದ ವೃದ್ದ ಮಹಿಳೆಗೆ ಠಾಣೆಯ ಪೊಲೀಸ್ ಸಿಬ್ಬಂದಿ ಕೆಲವೇ ಗಂಟೆಗಳಲ್ಲಿ ಮಗಳನ್ನು ಹುಡುಕಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.ಹೆತ್ತ ಮಗ ಳನ್ನು ಕಳೆದುಕೊಂಡು ಹುಡುಕುತ್ತಾ ಕೊನೆಗೆ ಬೆಂಗಳೂರಿಗೆ ಬಂದಿದ್ದ ವೃದ್ಧೆ ತಾಯಿಗೆ ಮಗಳನ್ನು ಒಪ್ಪಿಸಿಪುಲಿಕೇಶಿನಗರ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.ಮೊಬೈಲ್ ಅನ್ನು ತಮಿಳುನಾಡಿನಲ್ಲಿಯೇ ಬಿಟ್ಟು ಮಗಳನ್ನು ಹುಡುಕಿ ಕೊಂಡು ಬೆಂಗಳೂರಿಗೆ ಬಂದಿದ್ದ ವೃದ್ದೆಯು ಮಗಳ ಹೆಸರು ಬಿಟ್ಟು ಬೇರೇನು ಗೊತ್ತಿಲ್ಲದೇ ರಸ್ತೆಯಲ್ಲಿ ಹುಡುಕಾ ಡುತ್ತಾ ಕಣ್ಣೀರು ಹಾಕುತ್ತಿದ್ದರು.
ಇದನ್ನು ಗಮನಿಸಿದ ಪುಲಕೇಶಿ ನಗರದ ಹೊಯ್ಸಳ ಸಿಬ್ಬಂದಿಯು ಪುಲಿಕೇಶಿನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.ನಂತರ ವೃದ್ದೆಯ ಮಗಳನ್ನ ಸ್ಥಳೀಯರ ಸಹಾಯದಿಂದ ಸಂಪರ್ಕಿಸಿ ತಾಯಿಯನ್ನು ಮಗಳಿಗೆ ಒಪ್ಪಿಸಿದ್ದಾರೆ.ಬೆಂಗಳೂರಿನಲ್ಲಿ ಬಂದ ವೃದ್ಧೆಗೆ ಇಲ್ಲಿನ ಭಾಷೆ ಗೊತ್ತಿಲ್ಲದೆ ಪರದಾಡುವಂತಾಗಿತ್ತು.ಇದನ್ನು ಗಮನಿಸಿದ ಹೊಯ್ಸಳ ಸಿಬ್ಬಂದಿ ಠಾಣೆಗೆ ಕರೆದುಕೊಂಡು ಹೋಗಿ ತಾಯಿ ಮಗಳನ್ನು ಹೊಂದು ಮಾಡುವ ಮೂಲಕ ಮಾನ ವೀಯತೆ ಮೆರೆದಿದ್ದಾರೆ.