ಉತ್ತರ ಕರ್ನಾಟಕದ ರಾಜಕಾರಣಿ ಗಳು ತಾಂತ್ರಿಕವಾಗಿ ಮುಗ್ದರಿದ್ದಾರೆ ಎಚ್ಚರಿಕೆಯಿಂದ ಇರಬೇಕು ರಾಜಶೇಖರ ಮುಲಾಲಿ ಮಾತು……….

Suddi Sante Desk

ಧಾರವಾಡ –

ಉತ್ತರ ಕರ್ನಾಟಕದ ರಾಜಕಾರಣಿಗಳು ತಾಂತ್ರಿಕ ವಾಗಿ ಮುಗ್ದರಿದ್ದಾರೆ ಹೀಗಾಗಿ ತುಂಬಾ ತುಂಬಾ ಎಚ್ಚರಿಕೆಯಿಂದ ಇರಬೇಕು. ಹೀಗೆಂದು ಸಾಮಾಜಿಕ ಹೊರಾಟಗಾರ ರಾಜಶೇಖರ ಮುಲಾಲಿ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು ಈ ಮಾತಿಗೆ ನಾನು ಬದ್ಧನಾಗಿ ಇರುತ್ತೇನೆ ಇದನ್ನು ಈ ಭಾಗದ ರಾಜಕಾರಣಿಗಳು ತಿಳಿದುಕೊಳ್ಳಲಿ ಎಂದರು.ಇನ್ನೂ ದಿನೇಶ ಕಲ್ಲಹಳ್ಳಿ ಕೇಸ್ ವಾಪಸ್ ನಿರ್ಧಾರ ವಿಚಾರ ಕುರಿತಂತೆ ಮಾತನಾಡಿದ ಅವರು ಅವರಿಗೆ ಒತ್ತಡ ಗಳು ಏನಿದೆಯೋ ಗೊತ್ತಿಲ್ಲ ಬೇರೆ ಏನಾದರೂ ತೊಂದರೆ ಆಗಿರಬಹುದು ಹೀಗಾಗಿ ಹಿಂದೆ ತಗೆದುಕೊಂಡಿದ್ದಾರೆ ಇದು ಈಗ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.

ಇನ್ನೂ ದೇಶದಲ್ಲಿ ಪ್ರಾಮಾಣಿಕ ಸಾಮಾಜಿಕ ಹೋರಾಟಗಾರರ ಸಂಖ್ಯೆ ಬೆರಳೆಣಿಕೆಯಷ್ಟಿದೆ ಎಲ್ಲರೂ ಅಣ್ಣಾ ಹಜಾರೆ, ರಾಜಶೇಖರ ಮುಲಾಲಿ ಆಗೋಕೆ ಸಾಧ್ಯ ಇಲ್ಲ ಒಂದೇ ದಿನ ಹಿರೋ ಆಗಿ ಅವತ್ತೇ ಸಂಜೆ ವಿಲನ್ ಆದವರೂ ಇದ್ದಾರೆ. ಸಿಡಿ ಕೇಸ್‌ನಲ್ಲಿ ನನ್ನನ್ನೂ ಪಾರ್ಟಿ ಮಾಡಿದ್ದಾರೆ ಅಂತಾ ಮಾಧ್ಯಮಗಳಿಂದ ತಿಳಿದಿದೆ. ನಿನ್ನೆ ಯಾರೋ ಬಳ್ಳಾರಿಯ ನನ್ನ ಕಚೇರಿಗೆ ಹೋಗಿದ್ದರಂತೆ ಆದರೆ ಸಂಬಂಧಿಸಿದ ಕೋರ್ಟ್ ಕಾಪಿ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು.

ರಮೇಶ ಜಾರಕಿಹೊಳಿ ಇದೊಂದು ಷಡ್ಯಂತ್ರ ಅಂತಾ ಹೇಳಿದ್ದಾರೆ. ನಾನು ಎಲ್ಲಿಯೂ ಸಹ ನನ್ನ ಬಳಿ ಸಿಡಿ ಇವೆ ಅಂತಾ ಹೇಳಿಲ್ಲ.ಯಾರ ಬಳಿಯಾದರೂ ನನ್ನ ಹೇಳಿಕೆಯ ದಾಖಲೆ ಇದ್ದರೆ ತೋರಿಸಿ. ಮೀಡಿಯಾ ಗಳು ನಿಮಗೆ ಏನೂ ಬೇಕಾದರು ಹುಟ್ಟಿಸಿಕೊಳ್ಳು ತ್ತಿರಾ ಏನು ಟಿ‌.ಆರ್.ಪಿ ಬೇಕು ಅದನ್ನು ಮಾತ್ರ ಹಾಕಿಕೊಳ್ಳುತ್ತಿರಾ ಇದು ತಪ್ಪು ಅಲ್ವಾ, ನಾನೆಲ್ಲಿ ಹೇಳಿದ್ದೇನೆ ತೋರಿಸಿ ಎಂದು ಪ್ರಶ್ನಿಸಿದರು.ಇನ್ನೂ ಉತ್ತರ ಕರ್ನಾಟಕದ ರಾಜಕಾರಣಿಗಳು ತಾಂತ್ರಿಕ ವಾಗಿ ಮುಗ್ದರಿದ್ದಾರೆ ಈ ಮಾತಿಗೆ ನಾನು ಬದ್ಧನಾಗಿ ಇರುತ್ತೇನೆ.ಈ ಭಾಗದ ರಾಜಕಾರಣಿಗಳು ಎಚ್ಚರಿಕೆ ಯಿಂದ ಇರಬೇಕು ಅಂತಾ ನಾ ಹೇಳುವೆ ಎಂದರು. 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.